Bengaluru, ಮಾರ್ಚ್ 23 -- Bande Saheb: ಕನ್ನಡದಲ್ಲಿಯೂ ಆಗೊಂದು ಈಗೊಂದು ನೈಜ ಘಟನೆ ಆಧರಿತ ಸಿನಿಮಾಗಳು ತೆರೆಗೆ ಬರುತ್ತಿರುತ್ತವೆ. ಆದರೆ, ಹೆಚ್ಚು ಸದ್ದು ಮಾಡಿ, ನೆನಪಿನಲ್ಲಿ ಉಳಿಯುವಂತಹ ಸಿನಿಮಾಗಳ ಸಂಖ್ಯೆ ಕಡಿಮೆ. ಇದೀಗ ಪೊಲೀಸ್‌ ಅಧಿಕಾರಿಯೊಬ್ಬರ ಕುರಿತಾದ ಸಿನಿಮಾವೊಂದು ಸ್ಯಾಂಡಲ್‌ವುಡ್‌ನಲ್ಲಿ ಸಿದ್ಧವಾಗಿದೆ. ಸದ್ದಿಲ್ಲದೆ ಸಿದ್ಧವಾಗಿ, ಶೂಟಿಂಗ್‌ ಸಹ ಮುಗಿಸಿಕೊಂಡು ಬಿಡುಗಡೆಯ ಸನಿಹ ಬಂದು ನಿಂತಿದೆ. ಆ ಚಿತ್ರವೇ ಬಂಡೆ ಸಾಹೇಬ್.

‌ಕಳೆದ ಕೆಲವು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಶೂಟೌಟ್‌ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ (ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ ಅವರ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ. ನೈಜಘಟನೆ ಆಧಾರಿತ ಈ ಚಿತ್ರಕ್ಕೆ ಬಂಡೆ ಸಾಹೇಬ್ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ಸುನೀತಾ ವಿಲಿಯಮ್ಸ್‌ ಥರನೇ ಅಂತರಿಕ್ಷದಲ್ಲಿದ್ದ ಸರ್ಜೆ ಕ್ರಿಕಲಾವ್ ಅನುಭವಿಸಿದ ಸಂಕಟ ಹಲವು, ಆತ ಮರಳಿ ಬಂದಾಗ ದೇಶವೇ ಬದಲಾಗಿತ್ತು

ಚಿತ್ರದಲ್ಲಿ ಬಂಡೆ ...