Bangalore, ಮೇ 17 -- ಮೋಕ್ಷಿತಾ ಪೈ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ. ಚಂದದ ಸೀರೆ, ಬ್ಲೌಸ್‌, ಆಭರಣ ಮತ್ತು ಸಿಂಪಲ್‌ ಮೇಕಪ್‌ನಿಂದ ಇವರ ಸೌಂದರ್ಯ ನೂರುಪಟ್ಟು ಹೆಚ್ಚಾಗಿದೆ. ಇವರು ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಅಗ್ರ ನಾಲ್ಕನೇ ಸ್ಥಾನದವರೆಗೆ ಬಂದು ದೊಡ್ಮನೆಯಿಂದ ನಿರ್ಗಮಿಸಿದ್ದರು.

ಚಂದದ ಬ್ಲೌಸ್‌ ಡಿಸೈನ್‌, ಬ್ಲೌಸ್‌ ತೋಳಿನ ಡಿಸೈನ್‌, ರವಿಕೆಯ ಹಿಂಬದಿ ಡಿಸೈನ್‌ ಹುಡುಕುತ್ತಿದ್ದರೆ ನಿಮಗೆ ನಟಿ ಮೋಕ್ಷಿತಾ ಪೈ ಅವರ ಈ ರಂಗಿನ ರವಿಕೆ ಸ್ಪೂರ್ತಿ ನೀಡಬಲ್ಲದು.

ಬೆಂಗಳೂರಿನ ಸಹಕಾರ ನಗರದಲ್ಲಿರುವ ಮಾಯಾರಂಗ್‌ ಡಿಸೈನ್‌ ಸ್ಟುಡಿಯೋದ‌ ಟೈಲರ್‌ಗಳು ವಿನ್ಯಾಸ ಮಾಡಿರುವ ಬ್ಲೌಸ್‌ ಅಭಿಮಾನಿಗಳ ಗಮನ ಸೆಳೆದಿದೆ. ನಲ್ಮೆ ಸಾರಿ ಸ್ಟುಡಿಯೋದ ಸೀರೆಯಲ್ಲಿ ಇವರು ಮಿಂಚಿದ್ದಾರೆ.

ಚಾಮುಂಡೇಶ್ವರಿ ಕಲೆಕ್ಷನ್‌ನ ಜುವೆಲ್ಲರಿಯೂ ಪಾರು ಸೀರಿಯಲ್‌ ನಟಿಯ ಅಂದವನ್ನು ಹೆಚ್ಚಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಫೋಟೋಗಳಿಗೆ ಅಭಿಮಾನಿಗಳ ಕಾಮೆಂಟ್‌ಗಳ ಪ್ರವಾಹವೇ ಹರಿದುಬರುತ್ತಿದೆ.

ಇದು ಎಸ್‌ವಿ ಡಿಸೈನರ್...