Bangalore, ಮಾರ್ಚ್ 16 -- ತೆಣು ಅರಿಶಿನ ಬಣ್ಣದ ಆಕರ್ಷಿಸುವ ಕೇದಿಗೆ ಹೂವುಗಳ ಕೇವಲ ಎಲೆ/ಪಟ್ಟಿಯಂತೆ ಕಾಣುವ ಸುವಾಸನೆಭರಿತ ತೆನೆಗಳು. ಗಾಳಿ ಬೀಸುವ ದಿಕ್ಕಿನಲ್ಲಿ ನೂರಾರು ಮೀಟರ್ ದೂರಕ್ಕೂ ತನ್ನ ಪರಿಮಳ ಸೂಸುವಷ್ಟು ಸೌಗಂಧಿಕ ಹೂ ಇದು. ದಂಡು ದಂಡು ಮುಳ್ಳಿನ ಪೊದೆಯ ನಡುವೆ ಬೆಳೆಯುವ ಈ ಹೂವಿಗೆ ಪರಿಮಳದಿಂದಲೇ ಖ್ಯಾತಿ. ಚಿಕ್ಕವರಿದ್ದಾಗ ಕೆರೆ ಬದಿಯ ಪೊದೆಗಳಲ್ಲಿ ಹಳ್ಳ ಹಾಗೂ ಸಮುದ್ರದ ತಟಗಳಲ್ಲಿ ಹೆಚ್ಚಾಗಿ ನೋಡಲು ಸಿಗುತ್ತಿದ್ದ ಕೇದಗೆ ಮರ ಇತ್ತೀಚಿಗೆ ಕಾಣ ಸಿಗುವುದು ತುಂಬಾ ಅಪರೂಪವಾಗಿದೆ. ಕರಾವಳಿಯಲ್ಲಿ ಹೆಚ್ಚಾಗಿ ನಾಗರ ಪಂಚಮಿಯ ಸಮಯದಲ್ಲಿ ಕೇದಿಗೆ ಹೂವನ್ನು ಮಾರುಕಟ್ಟೆಯಲ್ಲಿ ನೋಡಬಹುದು ಆ ಸಮಯದಲ್ಲಿ ಹೂವಿನ ಮಾರುಕಟ್ಟೆ ಕೇದಗೆ ಪುಷ್ಪದ ಘಮದಿಂದಲೇ ಕೂಡಿರುತ್ತದೆ.

ನಾಗದೇವರಿಗೆ ಕೇದಿಗೆ ಪುಷ್ಪವು ಅತ್ಯಂತ ಪ್ರಿಯವೆಂಬ ಕಾರಣಕ್ಕಾಗಿ ನಾಗರ ಪಂಚಮಿಯ ಸಮಯದಲ್ಲಿ ಕೇದಿಗೆ ಹೂವಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಪುರಾಣದ ಪ್ರಕಾರ ಆರು ಜನ ಅಣ್ಣಂದಿರು ಮತ್ತು ಒಬ್ಬಳು ತಂಗಿ ಇರುವ ಕುಟುಂಬದಲ್ಲಿ ಅಣ್ಣಂದಿರು ನಾಗಗಳಿಗೆ ತೊಂದರೆ...