ಭಾರತ, ಮಾರ್ಚ್ 2 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್ ಆಟಗಾರ ಗ್ಲೆನ್ ಫಿಲಿಪ್ಸ್​ ಹಿಡಿದ ಸ್ಟನ್ನಿಂಗ್ಸ್​ ಕ್ಯಾಚನ್ನು ಮೀರಿಸುವಂತಹ ಕ್ಯಾಚೊಂದನ್ನು ಕೇನ್ ವಿಲಿಯಮ್ಸನ್ ಅವರು ಹಿಡಿದಿದ್ದಾರೆ. ಪಕ್ಷಿಯಂತೆ ಹಾರಿ ಒಂದೇ ಕೈಯಲ್ಲಿ ಹಿಡಿದಿರುವ ಈ ಕ್ಯಾಚ್​ ಮೈಜುಮ್ಮೆನಿಸುವಂತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ, ವಿಲಿಯಮ್ಸನ್ ಪಟಪಟನೇ ಜಿಗಿದ ಫನ್ನಿ ವಿಡಿಯೋ ಕೂಡ ವೈರಲ್ ಆಗಿದೆ.

ಇದಕ್ಕೂ ಮುನ್ನ ಗ್ಲೆನ್ ಫಿಲಿಪ್ಸ್ ಹಿಡಿದ ಕ್ಯಾಚ್ ಸಂಚಲನ ಸೃಷ್ಟಿಸಿತ್ತು. 7ನೇ ಓವರ್‌ನ 4ನೇ ಎಸೆತದಲ್ಲಿ ಕೊಹ್ಲಿ ಕಟ್ ಶಾಟ್ ಮಾಡಿದರು. ಬಿರುಸಿನ ಹೊಡೆತಕ್ಕೆ ವೇಗವಾಗಿ ಸಾಗಿದ ಚೆಂಡು ಬೌಂಡರಿಗೆ ಹೋಗಿದೆ ಎಂದೇ ಭಾವಿಸಲಾಗಿತ್ತು. ಕ್ಯಾಮೆರಾಮನ್​ ಕೂಡ ಬೌಂಡರಿ ಗೆರೆಯನ್ನು ತೋರಿಸಿಬಿಟ್ಟರು. ಆದರೆ, ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಫಿಲಿಪ್ಸ್, ತನ್ನ ಬಲಕ್ಕೆ ಅಪಾಯಕಾರಿ ಡೈವ್ ಮಾಡಿದರು. ಚಿರತೆಯಂತೆ ಹಾರಿದ ಫಿಲಿಪ್ಸ್, ಕಣ್...