ಭಾರತ, ಮಾರ್ಚ್ 21 -- ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರು ಹಿಡಿದ ಕ್ಯಾಚ್​ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಫೆಂಟಾಸ್ಟಿಕ್ ಕ್ಯಾಚ್ ಹಿಡಿಯುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಪಾಕಿಸ್ತಾನದ ಆಟಗಾರರು ಕಳಪೆ ಫೀಲ್ಡಿಂಗ್​ಗೆ ಹೆಸರುವಾಸಿಯಾಗಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್​ಗೂ ಗುರಿಯಾಗಿದ್ದುಂಟು. ಆದರೆ ಇದೀಗ ಹ್ಯಾರಿಸ್ ರೌಫ್ ಪಡೆದಿರುವ ಕ್ಯಾಚ್​ ಕ್ರಿಕೆಟ್ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡಿದೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ಐತಿಹಾಸಿಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 19.5 ಓವರ್​​ಗಳಲ್ಲಿ 204 ರನ್​ಗೆ ಆಲೌಟ್ ಆಯಿತು. ತಂಡದ ಪರ ಮಾರ್ಕ್​ ಚಾಪ್ಮನ್​ ಅವರು 94 ರನ್ ಗಳಿಸಿ ಶತಕ ವಂಚಿತರಾದರು. ಪಾಕಿಸ್ತಾನ 16 ಓವರ್​ಗಳಲ್ಲೇ 1 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಅದ್ಭುತ ಶತಕ ಸಿಡಿಸಿದ ಹಸನ್ ನವಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಹಸನ್ ನವಾಜ್ 45 ಎಸೆ...