Bengaluru, ಮಾರ್ಚ್ 17 -- Greater Bengaluru Bill: ಬೆಂಗಳೂರು ಟೌನ್ ಹಾಲ್ ಎಂಬ ನಾಗರಿಕರ ಗುಂಪಿನ ನಿಯೋಗ ಸೋಮವಾರ (ಮಾರ್ಚ್ 17) ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದು, ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಬಿಲ್‌ 2024ಕ್ಕೆ ಅಂಕಿತ ಹಾಕಬಾರದು ಎಂದು ಮನವಿ ಸಲ್ಲಿಸಿದೆ. ಈ ಮಸೂದೆಯನ್ನು ಕರ್ನಾಟಕ ವಿಧಾನ ಸಭೆ ಇತ್ತೀಚೆಗೆ ಅಂಗೀಕರಿಸಿತ್ತು. ಈ ಮಸೂದೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಏಳು ನಗರ ಪಾಲಿಕೆಗಳನ್ನಾಗಿ ವಿಭಜಿಸಿ ಗ್ರೇಟರ್ ಬೆಂಗಳೂರು ರಚಿಸುವ ಪ್ರಸ್ತಾವನೆಯನ್ನು ಒಳಗೊಂಡಿದೆ. ಅಲ್ಲದೆ, ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯ ಅಧಿಕಾರವನ್ನೂ ಒದಗಿಸುತ್ತದೆ. ಅದೇ ರೀತಿ, ಮೇಯರ್ ಮತ್ತು ಉಪ ಮೇಯರ್ ಅವರ ಅಧಿಕಾರಾವಧಿಯನ್ನು 30 ತಿಂಗಳ ತನಕ ವಿಸ್ತರಿಸುವುದಕ್ಕೂ ಅವಕಾಶ ನೀಡುತ್ತದೆ.

ಗ್ರೇಟರ್ ಬೆಂಗಳೂರು ಮಸೂದೆಯು 74 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಉಲ್ಲಂಘಿಸುತ್ತದೆ. ರಾಜ್ಯ ಚುನಾವಣಾ ಆಯೋಗದ ಅಧಿ...