ಭಾರತ, ಮಾರ್ಚ್ 18 -- ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯನ್ನು ಏಳು ಭಾಗಗಳನ್ನಾಗಿ ಮಾಡುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಸೂದೆಗೆ ವಿದಾನಮಂಡಲದಲ್ಲಿ ಅಂಗೀಕಾರ ಪಡೆದುಕೊಳ್ಳಲಾಗಿದೆ. ರಾಷ್ಟೀಯ ಜನಗಣತಿ ನಡೆಸಲು ಜೂನ್‌ 30 ರೊಳಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಗಡಿಯನ್ನು ನಿಗದಿಪಡಿಸಬೇಕು ಎಂದು ಕೇಂದ್ರ ಸರ್ಕಾರ ಗಡುವು ವಿಧಿಸಿದೆ. ಪ್ರಾಧಿಕಾರ ರಚನೆಯೆ ಪರಾಮರ್ಶೆಗೆ ರಚಿಸಲಾಗಿದ್ದ ಜಂಟಿ ಸದನ ಸಮಿತಿ ಬೆಂಗಳೂರಿನ ಹೊಸ ಪಾಲಿಕೆಗಳ ರಚನೆಗೆ ವಿಧೇಯಕ ಅಂಗೀಕಾರಗೊಂಡ ದಿನದಿಂದ 120 ದಿನಗಳ ಗಡುವು ವಿಧಿಸಿದೆ.

ಬೆಂಗಳೂರು ವಿಭಜನೆಯನ್ನು ಬಲವಾಗಿ ವಿರೋಧಿಸಿರುವ ಬಿಜೆಪಿ ಈಗಾಗಲೇ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರಿಗೆ ದೂರು ಸಲ್ಲಿಸಿ ವಿಧೇಯಕಕ್ಕೆ ಸಹಿ ಹಾಕದಂತೆ ಮನವಿ ಮಾಡಿದೆ. ನಗರದ ಅನೇಕ ನಾಗರೀಕ ಸಂಘಟನೆಗಳು ಪ್ರಾಧಿಕಾರವನ್ನು ವಿರೋಧಿಸಿವೆ. ಕೆಲವು ಸಂಘಟನೆಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಮತ್ತು ಹೈಕೋರ್ಟ್‌ ಮೊರೆ ಹೋಗಲು ನಿರ್ಧರಿಸಿವೆ.

ಕಳೆದ ಶುಕ್ರವಾರ ಉಭಯ ಸದನಗಳಲ್ಲಿ ಗ್ರೇಟರ್‌ ಬೆ...