Bengaluru, ಮಾರ್ಚ್ 27 -- Greater Bengaluru Governance Bill: ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯನ್ನು ವಿಸ್ತರಿಸಿ ಏಳರ ತನಕ ನಗರ ಪಾಲಿಕೆಗಳನ್ನು ವಿಭಜಿಸಲು ಅವಕಾಶ ಕಲ್ಪಿಸುವ 'ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ-2025' ಅನ್ನು ಕರ್ನಾಟಕ ಸರ್ಕಾರಕ್ಕೆ ವಾಪಸ್‌ ಕಳಿಸಿದ್ದು, ಕೆಲವು ಸ್ಪಷ್ಟನೆಗಳನ್ನು ನೀಡುವಂತೆ ಸೂಚಿಸಿದ್ದಾರೆ.

ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆಯನ್ನು ವಿಧಾನಸಭೆಯಲ್ಲಿ ಮಾರ್ಚ್‌ 10ರಂದು ಹಾಗೂ ಕೆಲವು ತಿದ್ದುಪಡಿಗಳ ಬಳಿಕ ವಿಧಾನ ಪರಿಷತ್‌ ಮಾರ್ಚ್‌ 12ರಂದು ಅಂಗೀಕಾರ ನೀಡಿತ್ತು. ಮಾರ್ಚ್‌ 13ರಂದು ತಿದ್ದುಪಡಿಗಳನ್ನು ಒಳಗೊಂಡ ಮಸೂದೆಯನ್ನು ವಿಧಾನಸಭೆಯಲ್ಲಿ ಮತ್ತೊಮ್ಮೆ ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ಇದಾದ ನಂತರ ರಾಜ್ಯಪಾಲರ ಅಂಕಿತಕ್ಕಾಗಿ ಮಾರ್ಚ್‌ 17ರಂದು ರಾಜಭವನಕ್ಕೆ ಕಳುಹಿಸಲಾಗಿತ್ತು. ಆದರೆ ಅದಕ್ಕೆ ಅಂಕಿತ ಹಾಕದೇ ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿ ಕೆಲವು ಸ್ಪಷ್ಟನೆಗಳು ಬೇಕು ಎಂದು ಕೋರಿದ್...