Bengaluru, ಫೆಬ್ರವರಿ 10 -- ಗರ್ಭಿಣಿಯರು ಆರೋಗ್ಯವಾಗಿರಲು ಹಲವು ನಿಯಮಗಳನ್ನು ಪಾಲಿಸುತ್ತಾರೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದರ ಜೊತೆಗೆ ಹಿರಿಯರಿಂದ ಬಂದ ಒಳ್ಳೆಯ ನಂಬಿಕೆಗಳನ್ನು ಪಾಲಿಸುತ್ತಾರೆ. ಅನೇಕರು ತಮ್ಮ ಮನೆಯ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಇಂದಿಗೂ ಅನುಸರಿಸುತ್ತಾರೆ. ಸೀಮಂತ ಸಮಾರಂಭದಿಂದ ಹಿಡಿದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ಒಳ್ಳೆಯ ನಂಬಿಕೆಯ ಮೇಲೆ ಪಾಲಿಸುತ್ತಾರೆ. ಗರ್ಭಿಣಿಯರು ಕೈಗೆ ಗೋರಂಟಿ ಅಥವಾ ಮೆಹೆಂದಿ ಹಾಕಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಇದನ್ನು ಪ್ರಾಚೀನ ಕಾಲದಿಂದಲೂ ಹಿರಿಯರು ಹೇಳುತ್ತಾ ಬಂದಿದ್ದಾರೆ. ಗರ್ಭಿಣಿಯರು ಕೈಗೆ ಮೆಹೆಂದಿಯನ್ನು ಏಕೆ ಹಾಕಿಕೊಳ್ಳಬಾರದು? ಹಾಗೆ ಹೇಳುವುದರ ಹಿಂದಿರುವ ಉದ್ದೇಶವೇನು? ಈ ಬರಹದಲ್ಲಿ ತಿಳಿಯೋಣ.

ಮಹಿಳೆಯರಿಗೆ ಮೆಹೆಂದಿ ಅಥವಾ ಗೋರಂಟಿ ಎಂದರೆ ಬಹಳ ಇಷ್ಟ. ಚೆಂದದ ಚಿತ್ತಾರವನ್ನು ಕೈಮೇಲೆ ಬರೆದುಕೊಂಡರೆ ನೋಡುವವರಿಗೂ ಅಷ್ಟೇ ಇಷ್ಟವಾಗುತ್ತದೆ. ಹಿಂದೂ ಧರ್ಮದಲ್ಲಿ ಮೆಹೆಂದಿಯನ್ನು ಸೋಲಾ ಶೃಂಗಾರಗಳಲ್ಲ...