ಭಾರತ, ಮೇ 10 -- ಅಮೃತಧಾರೆ ಧಾರಾವಾಹಿ: ಭೂಪತಿ ಜತೆ ಜೀವನ್‌ ಮಾತನಾಡುತ್ತಿದ್ದಾನೆ. "ಸಡನ್‌ ಆಗಿ ಇನ್‌ವೆಸ್ಟ್‌ಮೆಂಟ್‌ ವಾಪಸ್‌ ಕೊಡಿ ಎಂದು ಕೇಳಿದ್ರೆ ನಾನು ಏನು ಮಾಡಲಿ" ಎಂದು ಜೀವನ್‌ ಹೇಳುತ್ತಾನೆ. "ನೀನು ಗೌತಮ್‌ಗೆ ಬಯ್ಯೋದು, ಅವನು ಇಲ್ಲಿಗೆ ಬಂದು ನನಗೆ ಕಿರಿಕಿರಿ ಮಾಡೋದು. ನನಗೆ ಇಷ್ಟವಾಗೋಲ್ಲ. ನಿನಗೆ ಅವರು ಬೇಕಾ, ನಾನು ಬೇಕಾ ಎಂದು ತೀರ್ಮಾನ ಮಾಡು. ಇನ್ಮುಂದೆ ನಿನ್ನ ವಿಚಾರಕ್ಕೆ ನಿನ್ನ ಮನೆಯವರು ಇಲ್ಲಿಗೆ ಬರಬಾರದು" ಎಂದು ಭೂಪತಿ ಹೇಳುತ್ತಾನೆ. ಗೌತಮ್‌ ಬೇಕಾ, ಭೂಪತಿ ಬೇಕಾ ಎಂಬ ಗೊಂದಲದಲ್ಲಿ ಜೀವನ್‌ ಸಿಲುಕಿದ್ದಾನೆ. ಕೊನೆಗೆ "ನನಗೆ ನೀವೇ ಬೇಕು ಸರ್‌" ಎಂದು ಜೀವನ್‌ ಹೇಳುತ್ತಾನೆ. "ನನ್ನ ಅಪ್ಪ ಮತ್ತು ಅಮ್ಮನಿಗೂ ಇದನ್ನೇ ಹೇಳುವೆ" ಎಂದು ಹೇಳುತ್ತಾನೆ. ಈ ಮೂಲಕ ತನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಎಲ್ಲರನ್ನೂ ಮರೆಯುತ್ತಾನೆ. ಈ ಮೂಲಕ ಗೌತಮ್‌ನ ಒಂದು ಕೊಂಡಿ ಕಳಚಿತು. ಅವನನ್ನು ಒಂಟಿ ಮಾಡುವುದೇ ನನ್ನ ಪ್ಲ್ಯಾನ್‌ ಎಂದು ಭೂಪತಿ ಯೋಚಿಸುತ್ತಾರೆ.

ಅಪೇಕ್ಷಾ ಯೋಚನೆ ಮಾಡುತ್ತಿದ್ದಾಳೆ. ಅವಳಿಗೆ ತವರಿನ ನೆನಪ...