Bangalore, ಫೆಬ್ರವರಿ 12 -- Amruthadhaare serial Yesterday Episode: ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಬೆಳೆಸಿದ ಬೃಹತ್‌ ದಿವಾನ್‌ ಕಂಪನಿ ಧರಶಾಹಿಯಾಗುವ ಆತಂಕ ಕಂಡುಬಂದಿದೆ. ರಾಜೇಂದ್ರ ಭೂಪತಿ ಮಾಡಿದ ಕಿತಾಪತಿಗೆ ದಿವಾನ್‌ ಕಂಪನಿಯ ಷೇರುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಗೌತಮ್‌ ಇದ್ದಾರೆ. ದಿವಾನ್‌ ಕಂಪನಿಯ ಚೇರ್ಮನ್‌ ಪಟ್ಟದಲ್ಲಿ ಕುಳಿತುಕೊಳ್ಳುವ ಕನಸಿನಲ್ಲಿ ಜೈದೇವ್‌ ಇದ್ದಾನೆ. ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ.

ಆನಂದ್‌ ಮತ್ತು ಗೌತಮ್‌ ಮಾತನಾಡುತ್ತಿದ್ದಾರೆ. "ಇಲ್ಲಿ ಇತಿಹಾಸ ಬೇಕಿಲ್ಲ. ಈಗ ಏನು ನಡೆಯುತ್ತಿದೆ ಎನ್ನುವುದೇ ಮುಖ್ಯ. ನಮ್ಮ ಸೆಂಟಿಮೆಂಟ್‌ಗೆ ಜಾಗವಿಲ್ಲ. ಮಾರುಕಟ್ಟೆ ಸೆಂಟಿಮೆಂಟ್‌ಗೆ ತಕ್ಕಂತೆ ನಡೆಯುತ್ತದೆ. ಇಲ್ಲಿ ಯಾರೂ ನಮ್ಮವರಲ್ಲ. ಎಲ್ಲವೂ ಭ್ರಮೆ" ಎಂದೆಲ್ಲ ಗೌತಮ್‌ ಷೇರುಪೇಟೆಯ ಕುರಿತು ಆನಂದ್‌ಗೆ ತಿಳಿಸುತ್ತಾನೆ. ಇದೇ ಸಮಯದಲ್ಲಿ ಜನರ ಮನೋಭಾವದ ಕುರಿತೂ ಹೇಳುತ್ತಾರೆ. "ಆದರೂ ಇದನ್ನು ಡೈಜೆಸ್ಟ್‌ ಮಾಡಲು ಆ...