ಭಾರತ, ಮಾರ್ಚ್ 10 -- Amruthadhaare serial yesterday episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಎಪಿಸೋಡ್‌ನಲ್ಲಿ ಏನೇನೂ ಆಯ್ತು ಎಂದುನೋಡೋಣ. ಗೌತಮ್‌ನ ಮನಸ್ಸು ಬದಲಾಯಿಸಲು ಭೂಮಿಕಾ ಪ್ರಯತ್ನಿಸುತ್ತಿದ್ದಾಳೆ. ಮದುವೆ ಒಪ್ಪಿಕೊಳ್ಳಿ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ. "ನಾನು ಇಲ್ಲ ಅಂದುಕೊಳ್ಳಿ, ನಾನು ಸತ್ತಿದ್ದೇನೆ ಅಂದುಕೊಳ್ಳಿ. ಬೇರೆ ಮದುವೆ ಮಾಡಿಕೊಳ್ಳಿ" ಎಂದು ಭೂಮಿಕಾ ಹೇಳುತ್ತಾರೆ. "ನಾನು ಸತ್ತರೂ ಇದಕ್ಕೆ ಒಪ್ಪೋದಿಲ್ಲ" ಎಂದು ಗೌತಮ್‌ ಖಡಾಖಂಡಿತವಾಗಿ ಹೇಳುತ್ತಾರೆ. ಇವರನ್ನು ಎರಡನೆಯ ಮದುವೆಗೆ ಹೇಗೆ ಒಪ್ಪಿಸೋದು ಎಂದು ಭೂಮಿಕಾ ಆಲೋಚಿಸುತ್ತಾರೆ. ಇನ್ನೊಂದೆಡೆ ಇದೇ ವಿಷಯವನ್ನು ಲಕ್ಕಿ ಲಕ್ಷ್ಮಿಕಾಂತ್‌ ಮತ್ತು ಶಕುಂತಲಾ ಮಾತನಾಡುತ್ತಾರೆ. "ಅಂಕುಶ ಹಿಡಿದುಕೊಂಡು ಯಾವುದೇ ಆನೆಯನ್ನು ಪಳಗಿಸಬಹುದು. ಆದರೆ, ಆ ಆನೆ ರೊಚ್ಚಿಗೆದ್ದರೆ ಏನೂ ಮಾಡಲಾಗೋದಿಲ್ಲ. ಸತ್ಯ ಗೊತ್ತಾದ ಮೇಲೆ ಅವನ ಮುಂದೆ ನಿನ್ನ ಕಣ್ಣೀರು ವರ್ಕ್‌ ಆಗೋದಿಲ್ಲ" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾರೆ. "ಜೀವ ಕಳೆದುಕೊಳ್...