Bengaluru, ಮಾರ್ಚ್ 3 -- Amruthadhaare Serial Today Episode: ಜೈದೇವ್‌ ಮತ್ತು ಶಕುಂತಲಾದೇವಿ ಮಾತನಾಡುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಭೂಮಿಕಾ ಕೈಕೊಟ್ರೆ ಏನು ಗತಿ ಎಂದು ಜೈದೇವ್‌ ಕೇಳುತ್ತಾನೆ. ಅವಳು ಮನೆ ಬಿಟ್ಟು ಹೋಗುವುದು ಡೌಟ್‌ ಎಂದು ಲಕ್ಕಿ ಲಕ್ಷ್ಮಿಕಾಂತ್‌ ಹೇಳುತ್ತಾನೆ. "ಇಲ್ಲ ಈ ಬಾರಿ ಅವಳು ಸರಿಯಾಗಿ ಟ್ರ್ಯಾಪ್‌ಗೆ ಬಿದ್ದಿದ್ದಾಳೆ. ಈ ಬಾರಿ ಅವಳು ಪಾರಾಗಲು ಸಾಧ್ಯವಿಲ್ಲ" ಎಂದು ಶಕುಂತಲಾದೇವಿ ಭರವಸೆ ವ್ಯಕ್ತಪಡಿಸುತ್ತಾರೆ. ಎಲ್ಲಾದರೂ ಪ್ಲ್ಯಾನ್‌ ಉಲ್ಟಾ ಆದ್ರೆ ಕೈಗೆ ಕಪ್‌ ಅಲ್ಲ, ಕೈಗೆ ಚಿಪ್ಪು ದೊರಕುತ್ತದೆ ಎಂದು ಲಕ್ಷ್ಮಿಕಾಂತ್‌ ಆತಂಕಪಡಿಸುತ್ತಾನೆ. ಒಟ್ಟಾರೆ, ಶಕುಂತಲಾದೇವಿ ಗ್ಯಾಂಗ್‌ ಖುಷಿಯಲ್ಲಿದ್ದಾರೆ.

ಜೈದೇವ್‌ ದಿಯಾಳ ಜತೆ ಇದ್ದಾನೆ. ತುಂಬಾ ಖುಷಿಯಿಂದ ಇಬ್ಬರು ಮಾತನಾಡುತ್ತಿದ್ದಾರೆ. "ಈ ಲವ್‌ ಕೇರ್‌ ಬರೀ ಮಾತಲ್ಲಿ. ನನಗೆ ಕೇಳಿಕೇಳಿ ಸಾಕಾಯಿತು. ನನಗೆ ಒಂಟಿತನ ಕಾಡುತ್ತಿದೆ. ನನ್ನನ್ನು ಬೇಗ ಮದುವೆಯಾಗಿ" ಎಂದು ದಿಯಾ ಹೇಳುತ್ತಾಳೆ. "ನನ್ನಲ್ಲಿ ಎಲ್ಲಾ ಯೋಚನೆಗಳು ಇವೆ. ನಾನು ನಿನ್ನ ಬ...