Bengaluru, ಏಪ್ರಿಲ್ 6 -- ಜೀ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಸೀರಿಯಲ್‌ ಸದ್ಯ ಕರುನಾಡಿನ ಕಿರುತೆರೆ ವೀಕ್ಷಕರ ಗಮನ ಸೆಳೆದಿದೆ.

ನಾಲ್ಕೈದು ಕಥೆಗಳ ಸಂಗಮದಂತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಎಲ್ಲ ಪಾತ್ರಧಾರಿಗಳೂ ತಮ್ಮ ಅತ್ಯುತ್ತಮ ನಟನೆಯನ್ನು ನೀಡುತ್ತಿದ್ದಾರೆ.

ಟಿಆರ್‌ಪಿ ವಿಚಾರದಲ್ಲಿಯೂ ಟಾಪ್‌ನಲ್ಲಿರುವ ಲಕ್ಷ್ಮೀ ನಿವಾಸ, 12ನೇ ವಾರದ ಟಿಆರ್‌ಪಿಯಲ್ಲಿ 7.7 ಟಿವಿಆರ್‌ ಪಡೆದ ಈ ಸೀರಿಯಲ್‌ ಟಾಪ್‌ 2ನೇ ಸ್ಥಾನದಲ್ಲಿದೆ.

8 ಗಂಟೆಯಿಂದ 9ರ ವರೆಗೆ ಪ್ರಸಾರವಾಗುವ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸದ್ಯ ಜಾನು ಸಾವಿನ ವಿಚಾರ ಹೆಚ್ಚು ಚರ್ಚೆಯಲ್ಲಿದೆ.

ಇಂತಿಪ್ಪ ಸೀರಿಯಲ್‌ನಲ್ಲಿ ಸಿದ್ಧೇಗೌಡರ ಪಾತ್ರವೂ ನೋಡುಗರನ್ನು ಆಕರ್ಷಿಸಿದೆ. ಈಗ ಇದೇ ಸಿದ್ಧೇಗೌಡರು ಹೊಸ ಲುಕ್‌ನಲ್ಲಿ ಎದುರಾಗಿದ್ದಾರೆ.

ಲೆದರ್‌ ಜಾಕೆಟ್‌ ಧರಿಸಿ, ಕಣ್ಣಿಗೆ ಗ್ಲಾಸ್‌, ಬಾಯಲ್ಲಿ ಸಿಗಾರ್‌ ಹೊತ್ತಿಸಿ ಹೊಗೆ ಬಿಟ್ಟಿದ್ದಾರೆ. ಅವರ ಈ ಹೊಸ ಅವತಾರ ಕಂಡು ವೀಕ್ಷಕರು ಬೆಕ್ಕಸ ಬೆರಗಾಗಿದ್ದಾರೆ.

ಅಷ್ಟಕ್ಕೂ ಸಿದ್ದೇಗೌಡ ಅವರು ಈ ಅವತಾ...