ಭಾರತ, ಏಪ್ರಿಲ್ 3 -- ಬೆಂಗಳೂರು: ಚಿನ್ನದ ಅಕ್ರಮ ಸಾಗಾಟ ಪ್ರಕರಣದಲ್ಲಿ ಜೈಲಿನಲ್ಲಿರುವ ನಟಿ ರನ್ಯಾ ರಾವ್‌ ಅವರಿಗೆ ಪತಿ ಜತೀನ್‌ ಹುಕ್ಕೇರಿ ವಿವಾಹ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಪತಿ ಜತೀನ್‌ ಹುಕ್ಕೇರಿ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೋರ್ಟ್‌ ನಂಬರಿಂಗ್‌ ಇನ್ನೂ ಆಗಿಲ್ಲ ಎನ್ನಲಾಗಿದೆ. ವೈವಾಹಿಕ ಜೀವನದಲ್ಲಿ ಈಗಾಗಲೇ ಸಾಕಷ್ಟು ತೊಂದರೆಗಳಾಗಿದ್ದು, ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗಿದೆ.

"ನಾವು ಮದುವೆಯಾದಗಿನಿಂದ ಸಮಸ್ಯೆ ಆರಂಭವಾಗಿದೆ. ನನಗೆ ಮದುವೆಯಾದ ಮೊದಲ ದಿನದಿಂದಲೂ ನೋವು ಮತ್ತು ತೊಂದರೆಯಾಗಿದೆ. ಇಂದು ನಾನು ಡಿವೋರ್ಸ್‌ಗೆ ಅರ್ಜಿ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದೇನೆ" ಎಂದು ಮಾಧ್ಯಮಗಳ ಮುಂದೆ ಜತೀನ್‌ ತಿಳಿಸಿದ್ದಾರೆ ಎಂದು ಟೈಮ್ಸ್‌ನೌನ್ಯೂಸ್‌ ವರದಿ ಮಾಡಿದೆ.

ನಟಿ ರನ್ಯಾ ರಾವ್‌ ಮತ್ತು ಹುಕ್ಕೇರಿ ಕಳೆದ ವರ್ಷ ನವೆಂಬರ್‌ 27ರಂದು ಮದುವೆಯಾಗಿದ್ದರು. ಬ್ರೋಕರ್‌ ಮೂಲಕ ಪರಿಚಯವಾಗಿ ಮದುವೆಯಾಗಿದ್ದರು. ಒಂದೇ ತಿಂಗಳಲ...