ಭಾರತ, ಏಪ್ರಿಲ್ 8 -- Golden star Ganesh: ಗೋಲ್ಡನ್‌ ಸ್ಟಾರ್‌ ಗಣೇಶ್‌ ʻಪಿನಕʼ, ʻಯುವರ್ಸ್‌ ಸಿನ್ಸಿಯರ್ಲಿ ರಾಮ್‌ʼ ಸೇರಿ ಕನ್ನಡದ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈ ಸಿನಿಮಾ ಶೂಟಿಂಗ್‌ ಕೆಲಸಗಳಲ್ಲಿಯೂ ಅವರು ಭಾಗವಹಿಸಿದ್ದಾರೆ. ಈ ನಡುವೆ, ಗ್ಯಾಪ್‌ನಲ್ಲಿಯೇ ಹೊಸ ಸಿನಿಮಾ ಒಪ್ಪಿಕೊಂಡು, ಮುಹೂರ್ತೂ ನೆರವೇರಿದೆ. ಇತ್ತೀಚೆಗಷ್ಟೇ ರಾಮನವಮಿ ದಿನದಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ‌ಗಣೇಶನ ದೇವಸ್ಥಾನದಲ್ಲಿ ಎಸ್ಎನ್‌ಟಿ ಎಂಟರ್ಪ್ರೈಸಸ್‌ ಬ್ಯಾನರ್‌ನಲ್ಲಿ ಎಸ್ ಸಿ ರವಿ ಭದ್ರಾವತಿ ನಿರ್ಮಿಸುತ್ತಿರುವ ಸಿನಿಮಾದ ಮುಹೂರ್ತ ನೆರವೇರಿದೆ. ಖ್ಯಾತ ಗೀತಸಾಹಿತಿ ಅರಸು ಅಂತಾರೆ ನಿರ್ದೇಶನದಲ್ಲಿ ನಟ ಗಣೇಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ಪ್ರೋಡಕ್ಷನ್‌ ನಂ 1 ಎಂದು ಹೆಸರಿಡಲಾಗಿದೆ. ನಿರ್ಮಾಪಕ ರವಿ ಅವರ ಸಹೋದರಿಯರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು.

ʻಲವ್ ಇನ್ ಮಂಡ್ಯʼ ಸಿನಿಮಾ ಬಳಿಕ ಸುದೀರ್ಘ ಒಂದು ದಶಕದ ಬಳಿಕ ಮತ್ತೆ ನಿರ್ದೇಶನದ ಕ್ಯಾಪ್‌ ಧರಿಸಿದ್ದಾರೆ ಗೀತ ಸಾಹಿತಿ ಅ...