ಭಾರತ, ಏಪ್ರಿಲ್ 17 -- ದೆಹಲಿ: ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನಲ್ಲಿ ಮಂಗಳವಾರ (ಡಿಯುಎಸ್‌ಯು) ಅಧ್ಯಕ್ಷ ರೋನಕ್ ಖತ್ರಿ, ಪ್ರಾಂಶುಪಾಲೆ ಪ್ರತ್ಯೂಷ್ ವತ್ಸಲಾ ಅವರ ವಿವಾದಾತ್ಮಕ ಪ್ರಯೋಗವನ್ನು ವಿರೋಧಿಸಿ ಅವರ ಕಚೇರಿ ಗೋಡೆಗಳಿಗೆ ಹಸುವಿನ ಸಗಣಿ ಬಳಿದಿದ್ದಾರೆ. ಸಗಣಿ ಬಳಿದ ಕಾರಣ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ವಿಡಿಯೋದಲ್ಲಿ ಸೆರೆಯಾಗಿರುವ ಈ ಕೃತ್ಯದಲ್ಲಿ ಖತ್ರಿ ಕೈಗವಸು ಧರಿಸಿ ಪ್ರಾಂಶುಪಾಲರ ಕಚೇರಿಗೆ ಹಸುವಿನ ಸಗಣಿ ಲೇಪಿಸುತ್ತಿರುವುದನ್ನು ಗಮನಿಸಬಹುದು.

ಪ್ರಾಂಶುಪಾಲೆ ಯಾರನ್ನೂ ಕೇಳದೆ ಈ ರೀತಿ ಮಾಡಿರುವುದು ತಪ್ಪು ಎಂದು ಹೇಳಲಾಗುತ್ತಿದೆ. ಸಂಶೋಧನಾ ಉಪಕ್ರಮದ ಭಾಗವಾಗಿ ವಿದ್ಯಾರ್ಥಿಗಳನ್ನು ಸಂಪರ್ಕಿಸದೆ ಪ್ರಾಂಶುಪಾಲರು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ ಲೇಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. "ನೀವು ಸಂಶೋಧನೆ ಮಾಡಲು ಬಯಸಿದರೆ, ಅದನ್ನು ನಿಮ್ಮ ಮನೆಯಲ್ಲಿ ಮಾಡಿ" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲ...