ಭಾರತ, ಮಾರ್ಚ್ 2 -- ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ನೆಲ ಹಾಗೂ ಗೋಡೆಗಳಿಗೆ ಟೈಲ್ಸ್ ಅಂಟಿಸಿರುತ್ತಾರೆ. ಟ್ರೈಲ್ಸ್ ಸ್ವಚ್ಛ ಮಾಡುವುದು ಸುಲಭವಾದ್ರೂ ಎರಡು ಟೈಲ್ಸ್‌ಗಳು ಕೂಡಿರುವ ಅಂಚನ್ನು ಸ್ವಚ್ಛ ಮಾಡುವುದು ಕಷ್ಟ. ಈ ಜಾಗದಲ್ಲಿ ಕೊಳೆ ಅಂಟಿರುತ್ತದೆ. ಬಿಳಿ ಬಣ್ಣದ ಟೈಲ್ಸ್ ಆಗಿದ್ದರಂತೂ ಕೊಳೆ ಎದ್ದು ಕಾಣುತ್ತದೆ. ಟೈಲ್ಸ್‌ಗಳ ನಡುವೆ ಇರುವ ಗೆರೆಯನ್ನು ಸುಲಭವಾಗಿ ಸ್ವಚ್ಛ ಮಾಡಲು ಸಾಧ್ಯವಾಗಿಲ್ಲ ಎಂದರೆ ಇಲ್ಲಿ ಕೆಲವು ಸರಳ ಪರಿಹಾರಗಳಿವೆ. ಈ ಟ್ರಿಕ್ಸ್ ಅನುಸರಿಸಿದ್ರೆ ಕೆಲವೇ ಕ್ಷಣಗಳಲ್ಲಿ ಟೈಲ್ಸ್ ನಡುವಿನ ಗೆರೆಗಳಲ್ಲಿನ ಕೊಳೆ ಮಾಯವಾಗುತ್ತೆ.

ಟೈಲ್ಸ್‌ಗಳ ನಡುವೆ ಸಂಗ್ರಹವಾಗಿರುವ ಕೊಳೆಯನ್ನು ಸ್ವಚ್ಛಗೊಳಿಸಲು, ಅಡಿಗೆ ಸೋಡಾ ಅಥವಾ ಬೇಕಿಂಗ್ ಪೌಡರ್‌ನ ಪೇಸ್ಟ್ ಮಾಡುವ ಬದಲು, ಬಿಳಿ ಬಣ್ಣದ ಟೂತ್‌ಪೇಸ್ಟ್ ತೆಗೆದುಕೊಳ್ಳಿ. ಅದನ್ನು ಹಳೆಯ ಹಲ್ಲುಜ್ಜುವ ಬ್ರಷ್‌ಗೆ ಹಚ್ಚಿ ಮತ್ತು ಟೈಲ್‌ಗಳ ನಡುವೆ ಕಾಣುವ ಕಪ್ಪು, ಕೊಳಕು ಗೆರೆಗಳ ಮೇಲೆ ಉಜ್ಜಿ. ನಡುವೆ ಸ್ವಲ್ಪ ನೀರು ಅಥವಾ ಬಿಳಿ ವಿನೆಗರ್ ಸೇರಿಸುತ್ತಲೇ ಇರಿ...