ಭಾರತ, ಫೆಬ್ರವರಿ 18 -- ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಕಾರಣವಾದ ಐದು ಗ್ಯಾರಂಟಿಗಳ ಪೈಕಿ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು ಕಳೆದಿವೆ. ಆಗೊಮ್ಮೆ ಈಗೊಮ್ಮೆ ಮಾಸಿಕ 2000 ರೂ ಬ್ಯಾಂಕ್‌ ಖಾತೆಗೆ ಜಮಾ ಆಗುವುದು ತಡವಾದರೂ, ಕಳೆದ ಕೆಲವು ತಿಂಗಳುಗಳಿಂದ ಖಾತೆಗೆ ಹಣವೇ ಬಂದಿಲ್ಲ ಎಂದು ಮಹಿಳೆಯರು ದೂರುತ್ತಿದ್ದರೂ, ಈ ಯೋಜನೆಗೆ ಮಹಿಳೆಯರು ಫಿದಾ ಆಗಿರುವುದು ಸುಳ್ಳಲ್ಲ. ಪ್ರತಿ ತಿಂಗಳು ಈ ಯೋಜನೆಯ ಫಲಾನುಭವಿ ಮಹಿಳೆಯರ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ.

ಈ ಯೋಜನೆ 2023ರ ಜುಲೈ 19ರಂದು ಆರಂಭವಾಗಿದ್ದು 2023ರ ಆಗಸ್ಟ್‌ 30ರಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. 2024-25ನೇ ಸಾಲಿನ ಪೂರ್ಣ 12 ತಿಂಗಳಿಗೆ ಈ ಯೋಜನೆಗೆ 28,604.40 ಕೋಟಿ ರೂ. ಮೀಸಲಿಡಲಾಗಿದೆ. ಯೋಜನೆ ಆರಂಭವಾಗಿ ಆರ್ಥಿಕ ವರ್ಷ ಪೂರ್ಣಗೊಳ್ಳಲು 6 ತಿಂಗಳು ಮಾತ್ರ ಬಾಕಿ ಇದ್ದುದರಿಂದ 2023-24ನೇ ಸಾಲಿಗೆ ಈ ಯೋಜನೆಗೆ ಸರ್ಕಾರ 17 ಸಾವಿರ ಕೋಟಿ ರೂ ಮೀಸಲ...