ಭಾರತ, ಮಾರ್ಚ್ 23 -- Grihalakshmi Scheme: ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಚಿಂತೆ ಮಾಡ್ತಾ ಇದ್ದೀರಾ?. ಹಾಗಾದ್ರೆ ಇಲ್ಲಿ ಕೇಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ವಲ್ಪ ಸಮಾಧಾನ ನೀಡುವ ವಿಚಾರ ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣವನ್ನು ಮಾರ್ಚ್ 31ರ ಬಳಿಕ ಅಂದರೆ ಇನ್ನೊಂದು ವಾರ ಬಿಟ್ಟು ಹಾಕಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಅವರು ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ, ನಮ್ಮ ಸರ್ಕಾರದ ಅವಧಿಯಲ್ಲೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 2000 ರೂಪಾಯಿ ಹೆಚ್ಚಿಸಿದೆವು. ಅದಾದ ನಂತರ ಯಾವುದೇ ಸರ್ಕಾರ ಗೌರವಧನ ಹೆಚ್ಚಿಸಿರಲಿಲ್ಲ. ಈಗ ಈ ಸಲದ ಬಜೆಟ್‌ನಲ್ಲಿ ಅಂಗವಾಡಿ ಕಾರ್ಯಕರ್ತಯರ ಗೌರವಧನ 1,000 ರೂಪಾಯಿ, ಅಂಗನವಾಡಿ ಸಹಾಯಕಿಯರ ಗೌರವಧನ 750 ರೂಪಾಯಿ ಹೆಚ್ಚಿಸಿದ್ದೇವೆ. ಅದನ್ನು ಏಪ್ರಿಲ್ 1 ರಿಂದ ಶುರುವಾಗುವ ಹೊಸ ಹಣಕಾಸು ವರ್ಷದಿಂದಲೇ ಜಾರಿಗೆ ತರುತ್ತೇವೆ ಎಂದು ಹೇಳಿ...