ಭಾರತ, ಜನವರಿ 19 -- ಜಗತ್ತಿನ ದೈತ್ಯ ಸರ್ಚ್ ಇಂಜಿನ್ ಗೂಗಲ್ ಸಂಸ್ಥೆ ಪಿಎಚ್‌ಡಿ ಫಿಲೋಶಿಪ್ ಕಾರ್ಯಕ್ರಮವನ್ನು ಆರಂಭಿಸಿದ್ದು, ಭಾರತದ ಸೇರಿದಂತೆ ಜಗತ್ತಿನಾದ್ಯಂತ ಕಂಪ್ಯೂಟರ್ ಸೈನ್ಸ್ ಮತ್ತು ಇದಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಪಿಎಚ್‌ಡಿ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭವಿಷ್ಯದ ಆಧುನಿಕ ತಂತ್ರಜ್ಞಾನದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುವ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ, ಬೆಂಬಲ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಗೂಗಲ್ ಸಂಸ್ಥೆ ನಿಗದಿ ಪಡಿಸಿರುವ ಅರ್ಹತೆ, ಮಾನದಂಡಗಳು ನಿಮ್ಮಲ್ಲಿ ಇದ್ದರೆ ನೀವು ಕೂಡ ಅರ್ಜಿ ಸಲ್ಲಿಸಬಹುದು. ಪಿಎಚ್‌ಡಿ ಫಿಲೋಶಿಪ್ ಪಡೆಯಲು ಏನೆಲ್ಲಾ ಅರ್ಹತೆಯ ಮಾನದಂಡಗಳಿವೆ ಅನ್ನೋದನ್ನು ನೋಡೋಣ.

ಗೂಗಲ್ ಪಿಎಚ್‌ಡಿ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಪ್ರತಿ ವರ್ಷದಂತೆ ಮಾರ್ಚ್‌ನಿಂದ ಏಪ್ರಿಲ್ ವರೆಗೆ ಅವಕಾಶ ಇರುತ್ತದೆ

ಅರ್ಜಿ ಸಲ್ಲಿಸಲು ಪಿಎಚ್‌ಡಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಮೂಲ ವಿವರಗಳನ್ನು ಸಲ್ಲಿಸಬೇಕಾಗುತ್ತದೆ

ಅಲ್ಗೊರಿದಮ್, ಆಪ್ಟಿಮೈಸೇಷ...