Bengaluru, ಮೇ 7 -- ಗುರು ಗ್ರಹವು 2025ರ ಮೇ 14 ರಂದು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ರಾಹುವು 2025 ರ ಮೇ 18 ರ ಭಾನುವಾರದಂದು ಮೀನ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ ಗುರು ಮತ್ತು ರಾಹುಗ್ರಹಗಳ ನಡುವೆ ಪರಸ್ಪರ ದೃಷ್ಟಿ ಇರಲಿದೆ. 2025ರ ಅಕ್ಟೋಬರ್ 18 ರವರೆಗೆ ಈ ದೃಷ್ಟಿಯು ಮುಂದುವರೆಯುತ್ತದೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯೂ ವಿಶಿಷ್ಟವಾದ ಫಲಗಳನ್ನು ಪಡೆಯುತ್ತವೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಇರುವ ಫಲಾಫಲಗಳನ್ನು ಇಲ್ಲಿ ನೀಡಲಾಗಿದೆ.

ಸದಾ ಸಂತೋಷ ಹಂಚುವ ನಿಮ್ಮ ವ್ಯಕ್ತಿತ್ವ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಬರವಣಿಗೆಯಲ್ಲಿ ಆಸಕ್ತಿ ಮೂಡುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುವಿರಿ. ದೀರ್ಘಕಾಲದ ಪ್ರಯಾಣವನ್ನು ಮಾಡುವಿರಿ. ಶೀಘ್ರವಾಗಿ ಕೋಪಗೊಳ್ಳುವಿರಿ. ಆದರೆ ಬಹುಕಾಲ ನಿಲ್ಲುವುದಿಲ್ಲ. ಪ್ರಾಮಾಣಿಕತೆಯಿಂದ ನಿಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವಿರಿ. ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ...