ಭಾರತ, ಮೇ 7 -- ಗುರು ಗ್ರಹವು 2025ರ ಮೇ 14 ರಂದು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ರಾಹುವು 2025 ರ ಮೇ 18 ರ ಭಾನುವಾರದಂದು ಮೀನ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ ಗುರು ಮತ್ತು ರಾಹುಗ್ರಹಗಳ ನಡುವೆ ಪರಸ್ಪರ ದೃಷ್ಟಿ ಇರಲಿದೆ. 2025ರ ಅಕ್ಟೋಬರ್ 18 ರವರೆಗೆ ಈ ದೃಷ್ಟಿಯು ಮುಂದುವರೆಯುತ್ತದೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯೂ ವಿಶಿಷ್ಟವಾದ ಫಲಗಳನ್ನು ಪಡೆಯುತ್ತವೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಇರುವ ಫಲಾಫಲಗಳನ್ನು ಇಲ್ಲಿ ನೀಡಲಾಗಿದೆ.

ಸೋಲಿನ ಭಯ ಇರುವುದಿಲ್ಲ. ಕಷ್ಟವೆನಿಸಿದರು ಸಂದರ್ಭಕ್ಕೆ ಹೊಂದಿಕೊಂಡು ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದಲ್ಲಿ ಇರುವ ಭಿನ್ನಾಭಿಪ್ರಾಯಕ್ಕೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಬಲ್ಲಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಪ್ರಯತ್ನಕ್ಕೆ ತಕ್ಕಂತಹ ಫಲಗಳು ನಿಮಗೆ ದೊರೆಯಲಿವೆ. ಇರುವ ವರಮಾನದಲ್ಲಿಯೇ ಹಣವನ್ನು ಉಳಿತಾಯ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ. ಕೊಂಚವೂ ಯೋಚಿಸಿದೆ ಎಲ್ಲರ ಮಾತ...