ಭಾರತ, ಮಾರ್ಚ್ 6 -- ಮಾರ್ಚ್‌ 6 ಗುರು ರಾಘವೇಂದ್ರ ವರ್ಧಂತಿ. ರಾಘವೇಂದ್ರ ಸ್ವಾಮಿಗಳ ವರ್ಧಂತಿ ಆಚರಣೆಯ ಸಂದರ್ಭದಲ್ಲಿ ರಾಯರಿಗೆ ಸಂಬಂಧಿಸಿದ ಸಿನಿಮಾಗಳನ್ನು ನೋಡಬಹುದು ಅಥವಾ ನೆನಪಿಸಿಕೊಳ್ಳಬಹುದು. ಕನ್ನಡದಲ್ಲಿ ಗುರು ರಾಘವೇಂದ್ರರಿಗೆ ಸಂಬಂಧಪಟ್ಟಂತೆ ಹಲವು ಸಿನಿಮಾಗಳು ಬಂದಿವೆ. ಕನ್ನಡದಲ್ಲಿ ನಟ ಜಗ್ಗೇಶ್‌ ಗುರು ರಾಯರ ಭಕ್ತರಾಗಿದ್ದು,ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. ಕನ್ನಡದ ಹಲವು ನಟಿಯರು, ನಟರು ರಾಯರ ಆರಾಧಕರು. ಇದು ಕೇವಲ ಈಗಿನ ವಿಷಯವಲ್ಲ. ಕನ್ನಡ ಚಿತ್ರರಂಗದ ಆರಂಭದಿಂದಲೂ ಸಾಕಷ್ಟು ಕಲಾವಿದರು ರಾಯರಿಗೆ ಪೂಜೆ ಸಲ್ಲಿಸಿ ಸಿನಿಮಾ ಕೆಲಸ ಆರಂಭಿಸುತ್ತಿದ್ದರು. ಕನ್ನಡ ಸಿನಿಮಾ ಆರಂಭಕ್ಕೆ ಮೊದಲು ಮಂತ್ರಾಲಯದಲ್ಲಿ ಪೂಜೆ ಸಲ್ಲಿಸುವ ಕ್ರಮವನ್ನು ಅನೇಕ ಸಿನಿಮಾ ನಿರ್ಮಾಪಕರು ಅನುಸರಿಸುತ್ತಿದ್ದರು. ಬಿ.ಆರ್‌.ಪಂತುಲು, ಸಿಂಗ್‌ ಠಾಕೂರ್‌ ಚಿತ್ರ ನಿರ್ಮಾಣಕ್ಕೆ ಮುನ್ನ ಮಂತ್ರಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ತಮ್ಮ ಚಿತ್ರದ ಪ್ರತಿಯನ್ನು ಮಂತ್ರಾಲಯದ ಬೃಂದಾವನದಲ್ಲಿಟ್ಟು ಪೂಜೆ ಸಲ್ಲಿಸಿ ಯಶಸ...