Bangalore, ಏಪ್ರಿಲ್ 23 -- ಬೆಂಗಳೂರು: ಕೇರಳದ ನಂತರ ಕರ್ನಾಟಕ ಕರಾವಳಿ ಭಾಗದಲ್ಲೂ ವಾಟರ್ ಮೆಟ್ರೋ ಯೋಜನೆ ಜಾರಿಯಾಗಲಿದ್ದು, ಮಂಗಳೂರು ಸಮೀಪದಲ್ಲಿ ಇದನ್ನು ಅನುಷ್ಠಾನಗೊಳಿಸಲು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಕರ್ನಾಟಕ ಜಲಸಾರಿಗೆ ಮಂಡಳಿಯ ಸಮಿತಿ ಸಭೆ ಅನುಮತಿ ನೀಡಿದೆ. ಮಂಗಳೂರಿನ ಗುರುಪುರ- ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಕಾರ್ಯಗತ ಗೊಳಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದರು, ಕಳೆದ ತಿಂಗಳು ಮಂಡಿಸಿದ್ದ ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಟರ್ ಮೆಟ್ರೊ ಆರಂಭಿಸುವ ಘೋಷಣೆಯನ್ನು ಮಾಡಿದ ಚಟುವಟಿಕೆ ಗರಿಗೆದರಿದ್ದವು. ಈಗಿನ ಯೋಜನೆಯ ಪ್ರಕಾರವೇ ನಡೆದರೆ, 2026ರಲ್ಲಿ ಯಾವುದಾದರೂ ಮಂಗಳೂರಿನಲ್ಲಿ ವಾಟರ್ ಮೆಟ್ರೋ ಸೇವೆ ಆರಂಭಗೊಳ್ಳಲಿದೆ. ಬೆಳೆಯುತ್ತಿರುವ ಮಂಗಳೂರಿನ ಸಾರಿಗೆ ನಿಯಂತ್ರಣಕ್ಕೂ ಇದು ಸಹಕಾರಿಯಾಗಬಹುದು ಎನ್ನುವ ಅಭಿಪ್ರಾಯಗಳೂ ದಟ್ಟವಾಗಿವೆ.

Published by HT Digital Content Services with permission from HT K...