ಭಾರತ, ಮೇ 13 -- ಉತ್ತರ ಪ್ರದೇಶದ ಗುರುಗ್ರಾಮದ ಸೆಕ್ಟರ್ 34ರ ರಿಕೋ ಆಟೋ ಇಂಡಸ್ಟ್ರೀಸ್ ಸಮೀಪದ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಇಂತಹ ಅಸಾಮಾನ್ಯ ದರೋಡೆ ನಡೆದಿರುವಂಥದ್ದು. ಎಟಿಎಂ ಯಂತ್ರಕ್ಕೆ ಹಾನಿ ಮಾಡದೇ 10 ಲಕ್ಷ ರೂಪಾಯಿ ಎಗರಿಸಿದ ಹೈಟೆಕ್ ಕಳ್ಳ ಯಾರು ಎಂಬ ಕುತೂಹಲವೂ ಪೊಲೀಸರಿಗೆ ಇತ್ತು ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ (ಸಾಂಕೇತಿಕ ಚಿತ್ರ)

ಗುರುಗ್ರಾಮ ಎಟಿಎಂ ರಾಬರಿ ಪ್ರಕರಣ ಸಂಬಂಧಿಸಿ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ಶನಿವಾರ ಬಂಧಿಸಿದರು. ಆತನನ್ನು ವಿಚಾರಣೆಗೊಳಪಡಿಸಿದಾಗ, ಆತ ಎಟಿಎಂ ಯಂತ್ರಕ್ಕೆ ಹಾನಿ ಮಾಡದೇ 10 ಲಕ್ಷ ರೂಪಾಯಿ ದರೋಡೆ ಮಾಡಿದ್ದು ಎಲ್ಲರನ್ನೂ ದಂಗುಬಡಿಸಿತ್ತು. ಬಹುಶಃ ಇಂತಹ ಪ್ರಕರಣ ಇದೇ ಮೊದಲು ಎನ್ನುತ್ತಾರೆ ಪೊಲೀಸರು. (ಸಾಂಕೇತಿಕ ಚಿತ್ರ)

ಆತ ಎಟಿಎಂ ಯಂತ್ರವನ್ನು ಬುಡ ಸಹಿತ ಕಿತ್ತು ಹಾಕಿಲ್ಲ. ಅದನ್ನು ಒಡೆದು ಹಾಕಿಲ್ಲ. ಅಥವಾ ಹಿಂಬದಿಯಿಂದ ಮುರಿದು ಹಣ ತೆಗೆದುಕೊಂಡಿಲ್ಲ. ಈ ವಿಲಕ್ಷಣ ದರೋಡೆಯ ದೂರು ದಾಖಲಿಸಿಕೊಂಡ ಗುರುಗ್ರಾಮ ಪೊಲೀಸರು ತನಿಖೆ ನಡೆಸಿದ್ದಾರೆ. (ಸಾಂಕೇತಿಕ ಚ...