ಭಾರತ, ಏಪ್ರಿಲ್ 17 -- ಬೆಂಗಳೂರು: ಗುಡ್ ಫ್ರೈಡೆ ಮತ್ತು ಈಸ್ಟರ್ ಅಂಗವಾಗಿ ವಾರಾಂತ್ಯದ ರಜೆಗಳಿರುವ ಕಾರಣಕ್ಕೆ ಬೆಂಗಳೂರಿನಿಂದ ಕೇರಳ ಮತ್ತು ತಮಿಳುನಾಡಿಗೆ ತೆರಳುವ ಖಾಸಗಿ ಬಸ್‌ ಪ್ರಯಣ ದರ ದುಪ್ಪಟ್ಟಾಗಿದೆ. ಆಫ್‌ ಸೀಸನ್‌ ಗೆ ಹೋಲಿಸಿದರೆ ಈ ವಾರದಲ್ಲಿ ಬಸ್‌ ಪ್ರಯಾಣ ದರದಲ್ಲಿ ಹೆಚ್ಚಳವಾಗಿದೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಖಾಸಗಿ ಬಸ್‌ ಆಪರೇಟರ್‌ ಗಳ ಪ್ರಕಾರ ಈ ವಾರವಿಡೀ ಬಸ್‌ ಪ್ರಯಾಣದರಲ್ಲಿ ಏರಿಕೆಯಾಗುತ್ತಲೇ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸುದೀರ್ಘ ವಾರಾಂತ್ಯದ ಜತೆಗೆ ಬೇಸಿಗೆ ರಜಾ ದಿನಗಳೂ ಇರುವುದು ಬಸ್‌ ಪ್ರಯಾಣ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ರಜೆ ಇರುವ ಕಾರಣಕ್ಕೆ ಪೋಷಕರು ಮಕ್ಕಳೊಂದಿಗೆ ಕೇರಳ ಮತ್ತು ತಮಿಳುನಾಡು ಪ್ರವಾಸ ಕೈಗೊಳ್ಳುವುದು ಸರ್ವೇ ಸಾಮಾನ್ಯ. ಈ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಖಾಸಗಿ ಬಸ್‌ ಮಾಲೀಕರು ಬಸ್‌ ಪ್ರಯಾಣ ದರವನ್ನು ಏರಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಬಸ್‌ ಪ್ರಯಾಣ ದರವೇನೂ ಏಕಾಏಕಿ ಹೆಚ್ಚಳವಾಗಿಲ್ಲ. ಶಾಲಾ ...