ಭಾರತ, ಮಾರ್ಚ್ 25 -- ಐಪಿಎಲ್‌ 2024ರ 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ (GT vs PBKS) ತಂಡಗಳು ಮುಖಾಮುಖಿಯಾಗುತ್ತಿವೆ. ಮಾರ್ಚ್ 25ರಂದು ಜಿಟಿ ತವರು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳಿಗೂ ಇದು ಮೊದಲನೇ ಪಂದ್ಯ. ಕಳೆದ ವರ್ಷ ಈ ಎರಡೂ ತಂಡಗಳು ಪ್ಲೇಆಫ್ ತಲುಪಲು ವಿಫಲವಾಗಿದ್ದವು. ಈ ಬಾರಿ ಕೆಲವೊಂದು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದ್ದು, ಕಪ್‌ ಗೆಲ್ಲುವ ಉತ್ಸಾಹದಲ್ಲಿದೆ. ಗುಜರಾತ್‌ ತಂಡ ಕಳೆದ ಬಾರಿಯ ನಾಯಕ ಶುಭಮನ್‌ ಗಿಲ್ ನೇತೃತ್ವದಲ್ಲಿ ಆಡಲಿದ್ದು, ಪಂಜಾಬ್‌ ತಂಡಕ್ಕೆ ಹೊಸ ನಾಯಕ ಶ್ರೇಯಸ್‌ ಅಯ್ಯರ್‌ ಕಾಲಿಟ್ಟಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಗುಜರಾತ್‌ ಬಲಿಷ್ಠವಾಗಿ ಕಾಣುತ್ತಿದೆ. ಜೋಸ್ ಬಟ್ಲರ್, ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್ ಮತ್ತು ಕಗಿಸೊ ರಬಾಡ ಅವರಂಥ ಆಟಗಾರರ ಸೇರ್ಪಡೆ ತಂಡದ ಬಲ ಹೆಚ್ಚಿಸಲಿದೆ. ಇದೇ ವೇಳೆ ಪಂಜಾಬ್‌ ತಂಡ ಕೂಡಾ ಈ ಬಾರಿ ಬಲಿಷ್ಠ ತಂಡವನ್ನು ರಚಿಸಿದೆ. ಆಸೀಸ್‌ ಬಲಾಢ್...