ಭಾರತ, ಮಾರ್ಚ್ 13 -- ಬ್ಯಾಟಿಂಗ್ ಜೊತೆಗೆ ಬೌಲಿಂಗ್​ನಲ್ಲೂ ಮಿಂಚಿದ ಹೀಲಿ ಮ್ಯಾಥ್ಯೂಸ್ ಆಲ್​ರೌಂಡ್ ಆಟ, ನ್ಯಾಟ್ ಸೀವರ್​ ಬ್ರಂಟ್ ಮತ್ತು ಹರ್ಮನ್​ಪ್ರೀತ್​ ಕೌರ್​ ಆರ್ಭಟಕ್ಕೆ ನಲುಗಿದ ಗುಜರಾತ್ ಜೈಂಟ್ಸ್ ತಂಡದ ವಿರುದ್ಧದ ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯದಲ್ಲಿ 47 ರನ್ನಿಂದ ಜಯಿಸಿದ ಮುಂಬೈ ಇಂಡಿಯನ್ಸ್ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮಾರ್ಚ್​ 15ರಂದು ಶನಿವಾರ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು 2ನೇ ಬಾರಿಗೆ ಫೈನಲ್​​ನಲ್ಲಿ ಮುಖಾಮುಖಿಯಾಗುತ್ತಿವೆ. 2023ರ ಉದ್ಘಾಟನಾ ಆವೃತ್ತಿಯಲ್ಲಿ ಡಬ್ಲ್ಯುಪಿಎಲ್​ ಫೈನಲ್​ನಲ್ಲಿ ಡೆಲ್ಲಿ-ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಅಂದು ಗೆದ್ದು ಚೊಚ್ಚಲ ಚಾಂಪಿಯನ್ ಆಗಿತ್ತ ಮುಂಬೈ ಮತ್ತೊಂದು ಟ್ರೋಫಿ ನಿರೀಕ್ಷೆಯಲ್ಲಿದೆ.

ಮತ್ತೊಂದೆಡೆ ಚೊಚ್ಚಲ ಫೈನಲ್​ ನಿರೀಕ್ಷೆಯಲ್ಲಿದ್ದ ಗುಜರಾತ್ ತನ್ನ ಕಳಪೆ ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್​ನಿಂದಾಗಿ ಭಾರಿ ಬೆಲೆ ತೆತ್ತಿತು....