ಭಾರತ, ಫೆಬ್ರವರಿ 25 -- ಕಳೆದ ಪಂದ್ಯದಲ್ಲಿ 33 ರನ್​ಗಳಿಂದ ಸೋಲನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಲಯಕ್ಕೆ ಮರಳಿದ್ದು, ಡಬ್ಲ್ಯುಪಿಎಲ್ ಟೂರ್ನಿಯಲ್ಲಿ 3ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಶಫಾಲಿ ವರ್ಮಾ (44), ಜೆಸ್ ಜೊನಾಸನ್ (61*) ಅವರ ಬ್ಯಾಟಿಂಗ್ ಅಬ್ಬರ ಮತ್ತು ಶಿಖಾ ಪಾಂಡೆ ಸೇರಿ ಉಳಿದ ಬೌಲರ್​ಗಳ ಮಾರಕ ಬೌಲಿಂಗ್ ಬಲದಿಂದ ಗುಜರಾತ್ ಜೈಂಟ್ಸ್ ವಿರುದ್ಧ ಡೆಲ್ಲಿ 6 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿದೆ. ಆದರೆ ಕಳಪೆ ಬ್ಯಾಟಿಂಗ್​ಗೆ ಬೆಲೆತೆತ್ತ ಗುಜರಾತ್, ಮೂರನೇ ಸೋಲು ಕಂಡಿದೆ. ಇದರೊಂದಿಗೆ ಜಿಜಿ ಪ್ಲೇಆಫ್ ಹಾದಿ ದುರ್ಗಮವಾಗುತ್ತಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್​ ಲೀಗ್​​​ನ 10ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಡೆಲ್ಲಿ ಬೌಲರ್​ಗಳ ಅಬ್ಬರದ ಮುಂದೆ ಸದ್ದು ಮಾಡಲಿಲ್ಲ. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತಿ ಫುಲ್ಮಾಲಿ (40) ಅವರ ಅಬ್ಬರದ ಆಟದ ಪರಿಣಾಮ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್​...