ಭಾರತ, ಮಾರ್ಚ್ 28 -- ಐಪಿಎಲ್ 2025ರ ಆವೃತ್ತಿಯ 9ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳಾದ ಗುಜರಾತ್ ಟೈಟಾನ್ಸ್ (Gujarat Titans) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್‌ 29ರ ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಉಭಯ ತಂಡಗಳು ಟೂರ್ನಿಯ ಮೊದಲ ಗೆಲುವಿಗೆ ಎದುರು ನೋಡುತ್ತಿವೆ. ತವರು ಕ್ರೀಡಾಂಗಣದಲ್ಲಿ ಗುಜರಾತ್‌ ತಂಡ ಆಡಿದ ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ತವರಿನ ಅಭಿಮಾನಿಗಳ ಮುಂದೆ ಶುಭ್ಮನ್‌ ಗಿಲ್‌ ಬಳಗಕ್ಕೆ ಗೆಲುವು ಅನಿವಾರ್ಯವಾಗಿದೆ.

ಕಳೆದ ಋತುವಿನಲ್ಲಿ ನಿಧಾನಗತಿಯ ಓವರ್-ರೇಟ್ ಕಾಯ್ದುಕೊಂಡ ಕಾರಣದಿಂದ ಸಿಎಸ್‌ಕೆ ವಿರುದ್ಧದ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ನಿಷೇಧ ಅನುಭವಿಸಿದ್ದರು. ಇದೀಗ ಗುಜರಾತ್‌ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ನಾಯಕನಾಗಿ ಮುಂಬೈ ತಂಡಕ್ಕೆ ಮರಳಲಿದ್ದಾರೆ.

ಉಭಯ ತಂಡಗಳು ಐಪಿಎಲ್‌ ಇತಿಹಾಸದಲ್ಲಿ ಈವರೆಗೆ ಒಟ್ಟು 5 ಪ...