ಭಾರತ, ಮಾರ್ಚ್ 10 -- ಪಾನಿಪುರಿ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಳೆಗಾಲ, ಚಳಿಗಾಲ ಇಲ್ಲವೇ ಬೇಸಿಗೆ ಕಾಲದಲ್ಲೂ ಸಹ ಸಂಜೆಯಾಗುತ್ತಲೇ ಆಹಾರಪ್ರಿಯರು ಚಾಟ್ಸ್‌ ಸೆಂಟರ್‌ಗಳತ್ತ ಪಾನಿಪುರಿಗಾಗಿ ಹೋಗುವುದಂತೂ ಖಚಿತ. ಒಂದೇ ಜಾಗದಲ್ಲಿ ಹಲವು ರುಚಿಯ ಪಾನಿಪುರಿ ಸಿಗುವ ಈ ಕಾಲದಲ್ಲಂತೂ ರಾಜ್ಯಗಳ ಗಡಿ ದಾಟಿದರೆ ಕೇಳಬೇಕೆ, ಬಾಯಿಯಲ್ಲಿ ನೀರು ತರಿಸುವಷ್ಟು ವೈವಿಧ್ಯಮಯ ಪಾರಿಪುರಿಗಳು ಚಾಟ್ಸ್‌ ಪ್ರಿಯರಿಗೆ ಲಭ್ಯವಾಗುತ್ತದೆ.

ಭಾರತದ ಉತ್ತರ ಭಾಗದಲ್ಲಿ ಪಾನಿಪುರಿಗೆ ಹೆಚ್ಚಿನ ಬೇಡಿಕೆಯಿದೆ. ಈ ಕಾರಣಕ್ಕಾಗಿಯೇ ವ್ಯಾಪಾರಿಗಳು ಪಾನಿಪುರಿಯಲ್ಲಿ ಹೊಸತನಗಳನ್ನು ತರುವ ಯತ್ನವನ್ನು ಆಗಾಗ ಮಾಡುತ್ತಲೇ ಇರುತ್ತಾರೆ. ಅಂತಹ ಪ್ರಯತ್ನಗಳಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಬೀದಿ ವ್ಯಾಪಾರಿಯೊಬ್ಬರು ಯಶಸ್ಸು ಕಂಡಿದ್ದಾರೆ. ಇವರು ಮಾಡಿರುವ ʼಕಾಮನಬಿಲ್ಲಿನ ಪಾನಿಪುರಿʼ ಸದ್ಯ ಭಾರೀ ಬೇಡಿಕೆಯನ್ನು ಹೊಂದಿದೆ. Instagram ನಲ್ಲಿ @wander_eater_ ಎಂಬ ಖಾತೆಯಲ್ಲಿ ʼಕಾಮನಬಿಲ್ಲಿನ ಪಾನಿಪುರಿʼಯ ಬಗೆಗಿನ ವಿಡಿಯೊ ಪೋಸ್ಟ್‌ ಆಗಿದ್ದು, ಸಾಕ...