ಭಾರತ, ಏಪ್ರಿಲ್ 28 -- 14 ವರ್ಷದ ವೈಭವ್ ಸೂರ್ಯವಂಶಿ ದಾಖಲೆಯ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಸತತ ಮೂರು ಪಂದ್ಯಗಳಲ್ಲಿ ಗೆಲ್ಲುವ ಅವಕಾಶ ಇದ್ದರೂ ಕೈಚೆಲ್ಲಿದ ರಾಜಸ್ಥಾನ್ ಕೊನೆಗೂ ಗೆಲುವಿನ ದಡ ಸೇರಿದೆ. ಪ್ರಸ್ತುತ 10 ಮ್ಯಾಚ್​ಗಳಲ್ಲಿ 3 ಗೆಲುವು 6 ಅಂಕ ಪಡೆದು 8ನೇ ಸ್ಥಾನ ಪಡೆದಿದೆ. ಆದರೆ ಉಳಿದ ನಾಲ್ಕರಲ್ಲಿ ಒಂದು ಸೋತರೂ ಪ್ಲೇಆಫ್ ಕನಸು ಭಗ್ನಗೊಳ್ಳಲಿದೆ. ಮತ್ತೊಂದೆಡೆ ಸತತ ಗೆಲುವುಗಳಿಂದ ಬೀಗುತ್ತಿದ್ದ ಗುಜರಾತ್​ಗೆ ಈಗ ಸಣ್ಣ ಸೋಲಿನ ಬ್ರೇಕ್ ಸಿಕ್ಕಿದೆ. ಇದು ಶುಭ್ಮನ್ ಪಡೆಯ 3ನೇ ಸೋಲು. ಅಂಕಪಟ್ಟಿಯಲ್ಲಿ 12 ಅಂಕ ಪಡೆದು 3ನೇ ಸ್ಥಾನದಲ್ಲಿದೆ.

ಜೈಪುರದ ಸವಾಯ್ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಿಟಿ ತಂಡ 210 ರನ್ ಗಳ ಗುರಿ ನೀಡಿತು. ಶುಭ್ಮನ್ ಗಿಲ್ (84) ಮತ್ತು ಜೋಸ್ ಬಟ್ಲರ್​ (50) ಭರ್ಜರಿ ಅರ್ಧಶತಕ ಬಾರಿಸಿದರು. ರಾಜಸ್ಥಾನ ತಂಡವು 15.5 ಓವರ್​​ಗಳಲ್ಲಿ 2 ವಿಕೆಟ್ ನಷ್...