ಭಾರತ, ಏಪ್ರಿಲ್ 14 -- ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಲೆಯಾಗಿರುವ ಸಂಗತಿ ಹಬ್ಬಿದೆ. ಅದಕ್ಕಿಂತ ಹೆಚ್ಚಾಗಿ ಕೊಲೆ ಆದ ಕೆಲವೇ ಗಂಟೆಗಳ ಬಳಿಕ ಆರೋಪಿಯನ್ನು ಪೊಲೀಸರು ಸೆರೆಹಿಡಿಯಲು ಮಾಡಿದ ಪ್ರಯತ್ನ ಮತ್ತು ಪೊಲೀಸರು ಆತನ ಮೇಲೆ ನಡೆಸಿದ ಗುಂಡಿನ ದಾಳಿ ಹೆಚ್ಚು ಚರ್ಚೆಯಾಗುತ್ತಿದೆ. ಪೊಲೀಸರ ಗುಂಡೇಟಿಗೆ ಆರೋಪಿ ಈಗಾಗಲೇ ಮೃತನಾಗಿದ್ದಾನೆ. ಇದೇ ಸಂಗತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೃಷ್ಣ ಭಟ್‌ ಅವರು ಹಂಚಿಕೊಂಡ ಕೆಲಸ ಸಂಗತಿಗಳನ್ನು ನಾವಿಲ್ಲಿ ಯಥಾವತ್ತಾಗಿ ನೀಡಿದ್ದೇವೆ ಗಮನಿಸಿ. ಅವರ ಫೇಸ್ಬುಕ್‌ ಪೋಸ್ಟ್‌ನಲ್ಲಿನ ಮಾಹಿತಿ ಹೀಗಿದೆ.

ಹುಬ್ಬಳ್ಳಿಯ ಘಟನೆ ಒಂದು ದುರದೃಷ್ಟಕರ ಘಟನೆ. ಆತ ಮಾಡಿದ್ದು ಘನಘೋರ ಅಪರಾಧ. ಅವನನ್ನು ಅಷ್ಟೇ ಬೇಗ ಪತ್ತೆ ಮಾಡಿ ಹಿಡಿಯಲು ಹೋಗುವವರೆಗೆ ಪೊಲೀಸರು ಸರಿಯಾದ ಮತ್ತು ದಕ್ಷ ಕೆಲಸ ಮಾಡಿದ್ದಾರೆ. ಆದರೆ, ಅರೆಸ್ಟ್ ಮಾಡಲು ಬಂದವರ ಮೇಲೆ ಆತ ಗನ್ ಎತ್ತಲಿಲ್ಲ. ಆತನ ಬಳಿ ಗನ್ ಇರಲಿಲ್ಲ. ಕಲ್ಲು ಇತ್ತು. ಕಲ್ಲು ಎಸೆದಿದ್ದ. ಇವರು ಗುಂಡು ಹೊಡೆದರು. ಕಲ್ಲು ಹೊಡೆಯುವವನ ಮೇಲೆ ಗುಂಡಿನ ಮಳೆ ಸುರಿ...