ಭಾರತ, ಏಪ್ರಿಲ್ 27 -- ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ, ಭಾರತ 'ಎ' ತಂಡವು ಆಂಗ್ಲರ ನಾಡಿಗೆ ಪ್ರವಾಸ ಕೈಗೊಂಡು ಮೇ 30 ರಿಂದ ಕ್ಯಾಂಟರ್​​ಬರಿಯ ಸೇಂಟ್ ಲಾರೆನ್ಸ್‌ನ ಸ್ಪಿಟ್‌ಫೈರ್ ಮೈದಾನದಲ್ಲಿ 2 ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದೆ. 2ನೇ ನಾಲ್ಕು ದಿನಗಳ ಪಂದ್ಯ ಜೂನ್ 6 ರಿಂದ ನಾರ್ಥಾಂಪ್ಟನ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದೆ.

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿಯ ಪ್ರಕಾರ, ಕರುಣ್ ನಾಯರ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಇಬ್ಬರು ಭಾರತೀಯರಲ್ಲಿ ಒಬ್ಬರಾಗಿರುವ 33 ವರ್ಷದ ಕರುಣ್ ನಾಯರ್ 2017 ರಿಂದ ರಾಷ್ಟ್ರೀಯ ತಂಡಕ್ಕಾಗಿ ಆಡಿಲ್ಲ. ಆದಾಗ್ಯೂ, ಅವರು ಎಲ್ಲಾ ಸ್ವರೂಪಗಳ ದೇಶೀಯ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಗಮನ ಸೆಳೆದಿದ್ದಾರೆ.

ಕಳೆದ ಆವೃತ್ತಿಯಲ್ಲಿ ಟನ್​ಗಟ್ಟಲೇ ರನ್ ಗಳಿಸಿದ್ದ ಕರುಣ್, ಇದೀಗ ಐಪಿಎಲ್​ನಲ್ಲೂ ಮಿಂಚುತ್ತಿದ್​ದಾರೆ. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಮರು ಸೇರ್ಪಡೆಗೊಳ್ಳುವ ಅವಕಾಶವನ್ನು ಪಡೆಯುವ ಸ...