ಭಾರತ, ಏಪ್ರಿಲ್ 11 -- ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ ಸೀಸನ್ 2 ರಿಯಾಲಿಟಿ ಷೋನಲ್ಲಿ ಈ ಕನ್ನಡದ ಪ್ರಸಿದ್ಧ ರೊಮ್ಯಾಂಟಿಕ್ ಗೀತೆಗಳಿಗೆ ಜೋಡಿಗಳು ಜೊತೆಯಾಗಿ ಹೆಜ್ಜೆ ಹಾಕಲಿದ್ದಾರೆ. ಭರ್ಜರಿ ಬ್ಯಾಚುಲರ್‌ ಸೀಸನ್‌ 2ನಲ್ಲಿ ಡ್ರೋಣ್ ಪ್ರತಾಪ್‌ ಹಾಗೂ ಗಗನಾ ಭಾರಿ ಜೋಡಿಯಾಗಿದ್ದಾರೆ. ಈ ಜೋಡಿ ಈ ವಾರದ ವಿಶೇಷ ರೌಂಡ್‌ನಲ್ಲಿ ಸುಂದರಿ ಸುಂದರಿ ಎನ್ನುವ ಹಾಡಿಗೆ ಹೆಜ್ಜೆ ಹಾಕಿದೆ.

ಡ್ರೋನ್ ಪ್ರತಾಪ್ ಹಾಗೂ ಗಗನಾ ಭಾರಿ ಡಾನ್ಸ್ ಮೆಚ್ಚಿಕೊಂಡಿರುವ ತೀರ್ಪುಗಾರರು ಬೆಸ್ಟ್ ಪರ್ಫಾಮೆನ್ಸ್ ಎಂದು ಹೊಗಳಿದ್ದಾರೆ. ಮಾತ್ರವಲ್ಲ ಗಗನಾ ಕೂಡ ಡ್ರೋನ್ ಪ್ರತಾಪ್‌ರನ್ನು ಹಾಡಿ ಹೊಗಳುತ್ತಾರೆ. ಪ್ರತಾಪ್ ಮಲ್ಟಿಟ್ಯಾಲೆಂಟೆಡ್‌. ಅವರ ಬಳಿ ಎಲ್ಲಾ ರೀತಿಯ ಪ್ರತಿಭೆಗಳೂ ಇವೆ ಎಂದು ಗಗನಾ ಮನಸಾರೆ ಹೊಗಳುತ್ತಾರೆ. ಆ ಹೊತ್ತಿಗೆ ರಕ್ತಕಣ್ಣೀರು ಸ್ಟೈಲ್‌ನಲ್ಲಿ ಸ್ಟೇಜ್‌ ಮೇಲೆ ಎಂಟ್ರಿ ಕೊಡ್ತಾರೆ ಗಿಲ್ಲಿ ನಟ.

ಗಿಲ್ಲಿ ನಟ ವೇದಿಕೆ ಮೇಲೆ ಬಂದ್ರು ಅಂದ್ರೆ ಖಂಡಿತ ನಗುವಿಗೆ ಕೊರತೆ ಇಲ್ಲ. ಗಿಲ್ಲಿ ನಟನಿಗೆ ಮೊದಲಿನಿಂದಲೂ ಗಗನಾ ಭ...