Delhi, ಏಪ್ರಿಲ್ 24 -- ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ದಿನದ ಹಿಂದೆ ನಡೆದ ಉಗ್ರರ ದಾಳಿ ಹಾಗೂ ಪ್ರವಾಸಿಗರ ಸಾವಿನ ಪ್ರಕರಣದ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ ಗಡಿಯಲ್ಲಿ ಗಸ್ತು ಹೆಚ್ಚಿದೆ. ಗಸ್ತಿನಲ್ಲಿ ನಿರತರಾಗಿದ್ದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಾನ್ಸ್‌ಟೇಬಲ್ ಒಬ್ಬರು ಆಕಸ್ಮಿಕವಾಗಿ ಪಂಜಾಬ್‌ ಭಾಗದಲ್ಲಿನ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದಕ್ಕಾಗಿ ಪಾಕಿಸ್ತಾನ ರೇಂಜರ್ಸ್ ವಶಕ್ಕೆ ಪಡೆದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಫಿರೋಜ್‌ಪುರ ಸೆಕ್ಟರ್‌ನಲ್ಲಿ 182 ನೇ ಬೆಟಾಲಿಯನ್‌ನ ಕಾನ್ಸ್‌ಟೇಬಲ್ ಪಿ.ಕೆ.ಸಿಂಗ್ ಅವರನ್ನು ಬುಧವಾರ ಬಂಧಿಸಲಾಗಿದೆ. ಅವರ ಬಿಡುಗಡೆಗಾಗಿ ಬಿಎಸ್ಎಫ್ ಮತ್ತು ಪಾಕಿಸ್ತಾನ ರೇಂಜರ್‌ಗಳ ನಡುವೆ ಸಂವಹನ ಮಾರ್ಗಗಳ ಮೂಲಕ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿ ತಿಳಿಸಿದೆ.

ಸಮವಸ್ತ್ರ ಧರಿಸಿದ ಮತ್ತು ಸೇವಾ ರೈಫಲ್ ಹೊಂದಿದ್ದ ಜವಾನ್ ರೈತರ ಗುಂಪಿನೊಂದಿಗೆ ನೆರಳಿನ ಪ್ರದೇಶದಲ್ಲಿ ವಿಶ್ರಾಂ...