Bengaluru, ಮಾರ್ಚ್ 10 -- ಬಾಲಿವುಡ್‌ ನಟ ವಿಕ್ಕಿ ಕೌಶಲ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಎಂಬ ಪಟ್ಟಿವನ್ನು ಛಾವಾ ಸಿನಿಮಾ ಅಲಂಕರಿಸಿದೆ. ಇದರ ಜತೆಗೆ ಕಲೆಕ್ಷನ್‌ ವಿಚಾರದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ ಈ ಸಿನಿಮಾ.

2023ರ ಆಗಸ್ಟ್‌ 11ರಂದು ಬಿಡುಗಡೆ ಆಗಿದ್ದ ಗದರ್ 2 ಚಿತ್ರದ ದಾಖಲೆಯನ್ನು ಪುಡಿಮಾಡಿದೆ. ಈ ಸಿನಿಮಾ. ಗದರ್‌ ಚಿತ್ರ ಜಾಗತಿಕವಾಗಿ 686 ಕೋಟಿ ರೂ.ಗಳನ್ನು ಗಳಿಸಿತ್ತು. ಈಗ ದಾಖಲೆಯನ್ನು ಛಾವಾ ಮುರಿದು ಮುನ್ನಡೆದಿದೆ.

ಕೇವಲ ಭಾರತದಲ್ಲಿ 4 ವಾರದಲ್ಲಿ ಛಾವಾ ಸಿನಿಮಾ 525.7 ಕೋಟಿ ರೂ. ಸಂಗ್ರಹಿಸಿದೆ. ಮಾರ್ಚ್ 7 ರಂದು ತೆಲುಗು ಆವೃತ್ತಿಯೂ ಬಿಡುಗಡೆ ಆಗಿದ್ದು, ಕಲೆಕ್ಷನ್‌ನಲ್ಲಿ ಮತ್ತೆ ಏರಿಕೆ ಕಂಡಿದೆ. ಮೂರು ದಿನಗಳ ಅವಧಿಯಲ್ಲಿ 9.46 ಕೋಟಿ ಬಾಚಿಕೊಂಡಿದೆ ಈ ಸಿನಿಮಾ.

ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಕಾರಣದಿಂದಾಗಿ ಗಳಿಕೆಯಲ್ಲಿ ಕುಸಿತ ಕಂಡುಬಂದರೂ, ಚಿತ್ರವು ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ.

ಫೆಬ್ರವರಿ 1...