Bengaluru, ಜೂನ್ 11 -- ಗುರು ಗ್ರಹವು ಉಸಿರಾಟಕ್ಕೆ ಸಂಬಂಧಪಟ್ಟ ಗ್ರಹವಾಗಿದೆ. ಆದ್ದರಿಂದ ಇದು ಮೂಗನ್ನು ಸಹ ಪ್ರತಿನಿಧಿಸುತ್ತದೆ. ಗಲ್ಲವು ಶನಿಗೆ ಸಂಬಂಧಿಸಿದಾಗಿದೆ. ಆದ್ದರಿಂದ ಗಲ್ಲದ ಆಕೃತಿಯಿಂದಲೂ ಒಬ್ಬ ವ್ಯಕ್ತಿಯ ಗುಣ ಧರ್ಮವನ್ನು ತಿಳಿಯಬಹುದಾಗಿದೆ. ಗಲ್ಲವು ತ್ರಿಕೋಣಾಕಾರವಾಗಿ ಮೂಗಿನ ಹೊಳ್ಳೆಗಳು ಅಗಲವಾಗಿದ್ದರೆ ಅವರಲ್ಲಿ ಕುತೂಹಲದ ಬುದ್ದಿ ಇರುತ್ತದೆ. ಇವರಿಗೆ ಜೀವನದಲ್ಲಿ ಹಣಕಾಸಿನ ತೊಂದರೆ ಕಂಡುಬಂದರೂ ಬುದ್ದಿವಂತಿಕೆಯಿಂದ ಪಾರಾಗುತ್ತಾರೆ. ಮನಸ್ಸಿನಲ್ಲಿ ಆತಂಕ ಇರುವುದಿಲ್ಲ. ಹೆಚ್ಚಿನ ಮಟ್ಟದಲ್ಲಿ ಹಣ ಸಂಪಾದನೆ ಮಾಡುವ ಚಾತುರ್ಯ ಇವರಿಗೆ ಇರುತ್ತದೆ. ಇವರ ಮನಸ್ಸಿನಲ್ಲಿ ಸ್ವಾರ್ಥದ ಭಾವನೆ ಇರುವುದಿಲ್ಲ ಆದರೆ ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ತಾವು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಜನಸೇವೆ ಮಾಡುತ್ತಾರೆ. ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹಣವನ್ನು ಖರ್ಚು ಮಾಡುತ್ತಾರೆ. ಜನಹಿತಕ್ಕಾಗಿ ಸಂಘ ಸಂಸ್ಥೆಗಳನ್ನು ಆರಂಭಿಸಿ ಯಶಸ್ಸನ್ನು ಗಳಿಸುತ್ತಾರೆ.

ಇವರಿಗೆ ಇಷ್ಟವಾಗುವ ...