ಭಾರತ, ಫೆಬ್ರವರಿ 16 -- ಗುರುವು ಉಸಿರಾಟಕ್ಕೆ ಸಂಬಂಧಪಟ್ಟ ಗ್ರಹವಾಗಿದೆ. ಆದ್ದರಿಂದ ಇದು ಮೂಗನ್ನು ಸಹ ಪ್ರತಿನಿಧಿಸುತ್ತದೆ. ಗಲ್ಲವು ಶನಿಗೆ ಸಂಬಂಧಿಸಿದಾಗಿದೆ. ಹಾಗಾಗಿ ಮೂಗು ಮತ್ತು ಗಲ್ಲ ಎರಡು ನೋಡಲು ಸುಂದರವಾಗಿದ್ದಲ್ಲಿ ಅವರ ಜೀವನದಲ್ಲಿ ಅನೇಕ ಒಳ್ಳೆಯ ಕೆಲಸ ಕಾರ್ಯಗಳು ನಡೆಯುತ್ತವೆ ಎಂದು ಹೇಳಲಾಗುತ್ತದೆ. ಇವರ ಜೀವನದಲ್ಲಿ ಅನೇಕ ಶುಭಫಲಗಳು ದೊರೆಯುತ್ತವೆ. ಗಲ್ಲದಿಂದ ಒಬ್ಬ ವ್ಯಕ್ತಿಯ ಗುಣ ಧರ್ಮವನ್ನು ನಿರ್ಧರಿಸಬಹುದಾಗಿದೆ.

ಗಲ್ಲದ ಮಧ್ಯಬಾಗದಲ್ಲಿ ಕೆಲವರಿಗೆ ಕೆನ್ನೆಯಲ್ಲಿ ಇರುವಂತೆ ಗುಳಿ ಇರುತ್ತದೆ. ಇವರು ಜೀವನದಲ್ಲಿ ಯಾವುದಾದರು ದೊಡ್ಡಪ್ರಮಾಣದ ಕೆಲಸವನ್ನು ಮಾಡುತ್ತಾರೆ. ಜನೋಪಕಾರಿ ಕೆಲಸಗಳಲ್ಲಿ ಆಸಕ್ತಿ ವಹಿಸುತ್ತಾರೆ. ಇವರು ಅದೃಷ್ಟವಂತರೆಂದರೂ ತಪ್ಪಿಲ್ಲ. ಬೇರೆಯವರಿಗೆ ಕಠಿಣ ಎನಿಸುವಂತಹ ಕೆಲಸವನ್ನು ಇವರು ಸುಲಭವಾಗಿ ಮಾಡಬಲ್ಲರು. ಹೊಂದಾಣಿಕೆಯ ಗುಣ ಇರುವ ಕಾರಣ ವಿರೋಧಿಗಳು ಕಡಿಮೆ. ಉದ್ಯೋಗದಲ್ಲಿ ಉನ್ನತ ಮಟ್ಟ ದೊರೆಯುತ್ತದೆ. ಸ್ವಂತ ಉದ್ಧಿಮೆ ಸ್ಥಾಪಿಸುವ ಸಾಧ್ಯತೆಗಳು ಕಂಡುಬರುತ್ತವೆ. ಆದರೆ ಪಾಲುಗಾರಿಕೆ...