ಭಾರತ, ಏಪ್ರಿಲ್ 13 -- ಐದು ಮೂಲತತ್ವಗಳನ್ನು ಹೊಂದಿರುವ ಸಂಸ್ಕೃತ ಮೂಲದ ಕಥೆ ಪಂಚತಂತ್ರ. ಹಿತೋಪದೇಶವು ಸಂಸ್ಕೃತ ಭಾಷೆಯ ಒಂದು ಭಾರತೀಯ ಪಠ್ಯ. ಪಂಚತಂತ್ರ ಮತ್ತು ಹಿತೋಪದೇಶ ಕಥೆಗಳ ಸಾಕಷ್ಟು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸರಳ ಕನ್ನಡದಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರ ಮಾಡಿದ ಕಥೆಗಳ ಪುಸ್ತಕ ಅಂಗಡಿಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ ಅಮೆಜಾನ್ ಹಾಗೂ ಹರಿವು ಬುಕ್ಸ್‌ನಲ್ಲಿಯೂ ಲಭ್ಯವಿದೆ. ಆದರೆ, ಮೂಲ ಶ್ಲೋಕಸಹಿತ ಪಂಚತಂತ್ರ ಮತ್ತು ಹಿತೋಪದೇಶ ಸರಳ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು. ವಿಘ್ನೇಶ್ವರ್ ಭಟ್‌ ಅವರು ತಮ್ಮ ಫೇಸ್ಬುಕ್‌ನಲ್ಲಿ ಈ ಪುಸ್ತಕದ ಬಗ್ಗೆ ಹಂಚಿಕೊಂಡಿರುವ ಮಾಹಿತಿಯನ್ನು ನಾವು ಯಥಾವತ್ತಾಗಿ ನಿಮ್ಮ ಮುಂದಿಡುತ್ತಿದ್ದೇವೆ.

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಅನುವಾದ ಮಾಡಿದ ಪಂಚತಂತ್ರ ಮತ್ತು ಹಿತೋಪದೇಶದಲ್ಲಿನ ವಿಶೇಷತೆ ಏನು ಎಂಬುದನ್ನು ಅವರು ಬರೆದುಕೊಂಡಿದ್ದಾರೆ. ಆ ಅಂಶಗಳನ್ನು ನೀವಿಲ್ಲಿ ಗಮನಿಸಬಹುದು.

ಹಿತೋಪದೇಶವೂ ಈ ಸ್ವರೂಪದಲ್ಲಿ, ಇಷ್ಟು ಸರಳವಾ...