ಭಾರತ, ಮಾರ್ಚ್ 4 -- ಕ್ರಿಕೆಟ್ ಬಗ್ಗೆ ತಿಳಿದಿರುವ ಪ್ರತಿಯೊಬ್ಬರಿಗೂ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆ ಗೊತ್ತಿದೆ! ಆನ್​ಫೀಲ್ಡ್​ ಜೊತೆಗೆ ಆಫ್​ ಫೀಲ್ಡ್​​ನಲ್ಲೂ ಸಖತ್​ ಸದ್ದು ಮಾಡಿರುವ ವಾರ್ನರ್​, ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಪರ ಆಡುತ್ತಿದ್ದಾಗ​ ಅವರು ತೆಲುಗು ಸಾಂಗ್ಸ್​​​​ಗೆ ರೀಲ್ಸ್​, ಡ್ಯಾನ್ಸ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದರು. ರಾಜಮೌಳಿ ಜೊತೆಗೆ ಜಾಹೀರಾತಿನಲ್ಲೂ ನಟಿಸಿದ್ದರು. ತೆಲುಗು ನಟರ ಜೊತೆಗೂ ಕಾಣಿಸಿಕೊಂಡಿದ್ದರು. ಹೈದರಾಬಾದ್ ತನ್ನ ಎರಡನೇ ತವರು ಎಂದು ವಾರ್ನರ್ ಹಲವು ಸಲ ಹೇಳಿದ್ದರು. ಈ ಕಾರಣಕ್ಕೆ ತೆಲುಗು ಚಿತ್ರಗಳಲ್ಲಿ ನಟಿಸುವಂತೆ ಫ್ಯಾನ್ಸ್​ ಸಾಮಾಜಿಕ ಜಾಲತಾಣಗಳಲ್ಲಿ ಕೋರಿದ್ದರು. ಇದೀಗ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ ಕ್ರಿಕೆಟಿಗ!

ಹೌದು, ಸನ್​ರೈಸರ್ಸ್ ಹೈದರಾಬಾದ್ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಸದ್ದಿಲ್ಲದೆ​ ಟಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಪುಷ್ಪ-2 ಸೇರಿ ಬ್ಲಾಕ್​ಬಸ್ಟರ್​ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಮೈತ್ರಿ ಮೂವಿ ...