Bangalore, ಏಪ್ರಿಲ್ 26 -- ಚೆನ್ನೈ ಸೂಪರ್ ಕಿಂಗ್ಸ್ 'ಚೆಪಾಕ್ ಕೋಟೆ' ಕುಸಿದು ಬಿದ್ದ ಹಿನ್ನೆಲೆ ಎಂಎಸ್ ಧೋನಿ ನಾಯಕತ್ವದ ತಂಡ ಪ್ಲೇಆಫ್ ಪ್ರವೇಶಿಸಲು ಹೆಣಗಾಡುವಂತ ಪರಿಸ್ಥಿತಿಗೆ ಸಿಲುಕಿದೆ. ಪ್ಲೇಆಫ್ ತಲುಪುವ ಸಿಎಸ್ಕೆ ಭರವಸೆಗಳು ಹುಸಿಯಾಗಿದ್ದು, ಪ್ರಸಕ್ತ ಋತುವಿನಲ್ಲಿ ಏಳನೇ ಸೋಲನ್ನು ಅನುಭವಿಸಿದೆ. 9 ಪಂದ್ಯಗಳ ನಂತರ ತಂಡವು ಕೇವಲ ನಾಲ್ಕು ಅಂಕ ಗಳಿಸಲು ಸಾಧ್ಯವಾಗಿದೆ. ತಂಡಕ್ಕೆ ಇನ್ನೂ ಐದು ಪಂದ್ಯಗಳು ಉಳಿದಿವೆ. 5 ಪಂದ್ಯಗಳನ್ನು ಗೆದ್ದ ನಂತರ ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯಲು ಸಾಧ್ಯವೇ? ಅಂಕ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿರುವ ಐದು ಬಾರಿಯ ಚಾಂಪಿಯನ್ ತಂಡ ಪ್ಲೇಆಫ್ ಪ್ರವೇಶಿಸಲು ಏನು ಮಾಡಬೇಕು? ಇಲ್ಲಿದೆ ವಿವರ.
ಚೆನ್ನೈ ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಸೋತಿದ್ದರೂ ಪ್ಲೇ ಆಫ್ ರೇಸ್ನಿಂದ ಇನ್ನೂ ಸಂಪೂರ್ಣವಾಗಿ ಹೊರಗುಳಿದಿಲ್ಲ. ಇದಕ್ಕೆ ತಂಡವು ಕಠಿಣ ಪರಿಶ್ರಮ ಹಾಕಬೇಕು. ಗಣಿತದ ಪ್ರಕಾರ, ತಂಡವು ಪ್ಲೇಆಫ್ ರೇಸ್ನಲ್ಲಿ ಇನ್ನೂ ಜೀವಂತವಾಗಿದೆ. ಏಕೆಂದರೆ ತಂಡವು ಉಳಿದ 5 ಪಂದ್ಯಗಳನ್ನು ಗೆದ್ದು 14 ಅಂಕ...
Click here to read full article from source
To read the full article or to get the complete feed from this publication, please
Contact Us.