ಭಾರತ, ಜನವರಿ 26 -- Republic Day 2025: ದೇಶಾದ್ಯಂತ ಇಂದು (ಜನವರಿ 26, ಭಾನುವಾರ) 76ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಪ್ರತಿ ವರ್ಷ ಭಾರತದ ಸಂವಿಧಾನವನ್ನು ಅಂಗೀಕರಿಸುವ ಮತ್ತು ದೇಶವನ್ನು ಗಣರಾಜ್ಯವಾಗಿ ಪರಿವರ್ತಿಸುವ ಗಣರಾಜ್ಯೋತ್ಸವವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ಗಣತಂತ್ರದ ದಿನವನ್ನು ಸ್ಮರಿಸಿಕೊಳ್ಳಲು ಈ ದಿನದಂದು ರಾಷ್ಟ್ರಪತಿ ಭವನದ ಬಳಿಯ ರೈಸಿನಾ ಹಿಲ್ಸ್ ನಿಂದ ಪ್ರಾರಂಭವಾಗುವ ಸ್ತಬ್ಧಚಿತ್ರಗಳು, ಸೇನಾ ಶಕ್ತಿ ಪ್ರದರ್ಶನದ ಭವ್ಯ ಮೆರವಣಿಗೆಯು ಕಾರ್ತವ್ಯ ಮಾರ್ಗದ ಮೂಲಕ, ಇಂಡಿಯಾ ಗೇಟ್ ಅನ್ನು ದಾಟಿ, ಐತಿಹಾಸಿಕ ಕೆಂಪು ಕೋಟೆಗೆ ಆಗಮಿಸುತ್ತವೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಈ ಭವ್ಯ ಕಾರ್ಯಕ್ರಮವನ್ನು ನೋಡಲು ನೀವು ದೆಹಲಿಗೆ ಹೋಗಲು ಸಾಧ್ಯವಾಗದಿದ್ದರೆ ಅಥವಾ ಪೆರೇಡ್ ಸಮಾರಂಭಕ್ಕೆ ಟಿಕೆಟ್ ಖರೀದಿಸಲು ಅವಕಾಶ ಸಿಗದಿದ್ದರೆ ನೀವು ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಬದ...