Gadag,Bengaluru, ಏಪ್ರಿಲ್ 13 -- ಗದಗ ಜಿಲ್ಲೆ ಗಜೇಂದ್ರಗಡ ಪಟ್ಟೇದಂಚು ಸೀರೆಗೆ ಈಗ ಜಿಐ ಟ್ಯಾಗ್ (ಭೌಗೋಳಿಕ ಗುರುತು) ಪಡೆದುಕೊಂಡ ಸಂಭ್ರಮ. ಅಪ್ಪಟ ಕೈಮಗ್ಗದ ಪರಿಶುದ್ಧ ಕಾಟನ್‌ ಸೀರೆಗೆ 400 ವರ್ಷಗಳ ಇತಿಹಾಸವಿದೆ. ಈ ಕಾಟನ್ ಸೀರೆ ಅದರ ಅಚ್ಚುಕಟ್ಟಾದ ನೇಯ್ಗೆಗೆ ಹೆಸರುವಾಸಿ. ಗದಗ ಸುತ್ತಮುತ್ತ ಮಹಿಳೆಯರು ಇಷ್ಟುಪಟ್ಟು ಉಡುವ ಸೀರೆ ಇದು. ಪಟ್ಟೇದಂಚು ಸೀರೆ ಅಂತ ಹೆಸರು ಯಾಕೆ ಬಂತು, ದರ ಮತ್ತು ಇತರೆ ವಿವರ ತಿಳಿಯೋಣ.

ಗದಗ ಜಿಲ್ಲೆಯ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ ನಮ್ಮ ದೇಶದ ಸ್ವಾತಂತ್ರ್ಯಪೂರ್ವದಲ್ಲೇ ಅಂದರೆ 1944ರಲ್ಲಿ ಸ್ಥಾಪನೆಯಾಗಿದೆ. ಅಂದಿನಿಂದ ಇಂದಿನವರೆಗೂ ಇಲ್ಲಿ ನೇಕಾರರು ಕೈಮಗ್ಗದಲ್ಲೇ ಪರಿಶುದ್ಧ ಹತ್ತಿಯ ನೂಲನ್ನೇ ನೇಯ್ದು ಸೀರೆ ಮಾಡಿ ಮಾರುಕಟ್ಟೆಗೆ ತಲುಪಿಸುತ್ತಿರುವುದು ವಿಶೇಷ. ಇಂತಹ ಕೈಮಗ್ಗದ ಪರಂಪರೆ ಗಜೇಂದ್ರಗಡ ಪಟ್ಟೇದಂಚು ಸೀರೆಗಳದ್ದು.

ಗಜೇಂದ್ರಗಡ ಪಟ್ಟೇದಂಚು ಸೀರೆಗಳ ಇತಿಹಾಸ ಕೆದಕಿದರೆ 400 ವರ್ಷಗಳ ಇತಿಹಾಶ ಇದೆ ಎನ್ನುತ್ತದೆ ಸಂಘ. ಸದ್ಯ ಚಾಲ್ತಿಯಲ್ಲಿರುವ ವೋಕಲ್ ಫಾರ್ ಲೋಕಲ್‌...