Gadag,Bengaluru, ಏಪ್ರಿಲ್ 13 -- Gajendragad Pattedanchu Saree: ಗದಗ ಜಿಲ್ಲೆ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘಕ್ಕೆ ಕೈಮಗ್ಗದಲ್ಲಿ ಪರಿಶುದ್ಧ ಕಾಟನ್‌ ಪಟ್ಟೆದಂಚು ಸೀರೆ ಉತ್ಪಾದನೆಗೆ ಸಂಬಂಧಿಸಿದ ಜಿಐ ಟ್ಯಾಗ್ ಸಿಕ್ಕಿದೆ. ಜವಳಿ ಇಲಾಖೆಯ ಸಹಕಾರದೊಂದಿಗೆ 2019ರಲ್ಲಿ ಜಿಐ ಟ್ಯಾಗ್‌ಗೆ ಸಂಘ ಅರ್ಜಿ ಸಲ್ಲಿಸಿತ್ತು. ಖಾಸಗಿಯವರ ಆಕ್ಷೇಪಣೆಯ ನಡುವೆ 1944ರಷ್ಟು ಹಳೆಯ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘಕ್ಕೆ ಕೈಮಗ್ಗದಲ್ಲಿ ಪರಿಶುದ್ಧ ಕಾಟನ್‌ ಪಟ್ಟೆದಂಚು ಸೀರೆ ಉತ್ಪಾದನೆ ಭೌಗೋಳಿಕ ಗುರುತು ಸಿಕ್ಕಿದೆ.

ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘವು ರಾಮಯ್ಯ ಕಾಲೇಜ್ ಆಫ್ ಲಾ ಸೆಂಟರ್‌ ಫಾರ್ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಸಹಯೋಗದಲ್ಲಿ ಕರ್ನಾಟಕದ ಜಿಐ ಟ್ಯಾಗ್ ನೋಡಲ್ ಏಜೆನ್ಸಿಯಾಗಿರುವ ದಿ ವಿಶ್ವೇಶ್ವರಯ್ಯ ಪ್ರಮೋಷನ್ ಸೆಂಟರ್‌ನಲ್ಲಿ ಕೈಮಗ್ಗದ ಪಟ್ಟೆದಂಚು ಸೀರೆಯ ಜಿಐ ಟ್ಯಾಗ್‌ ನೋಂದಣಿ ಮಾಡಿಸಿಕೊಂಡಿದೆ.

ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘ 1944ರಲ್ಲಿ ಸ್ಥಾಪನೆಯಾಗಿದೆ. ಸಂಘ...