Bengaluru, ಮಾರ್ಚ್ 6 -- Bharjari Bachelores Season 2: ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ರಲ್ಲಿ ಇದೀಗ ಏಂಜಲ್‌ಗಳಿಗೆ ಸರ್ಪ್ರೈಸ್‌ ನೀಡಿ ಅವರ ಹೃದಯಕ್ಕೆ ಲಗ್ಗೆ ಇಡುತ್ತಿದ್ದಾರೆ ಬ್ಯಾಚುಲರ್ಸ್‌ಗಳು. ಆ ಪೈಕಿ ಡ್ರೋನ್‌ ಪ್ರತಾಪ್‌, ತಮ್ಮ ಜೊತೆಗಾತಿ ಗಗನಾ ಅವರಿಗೆ ಸರ್ಪ್ರೈಸ್‌ ನೀಡಿದ್ದಾರೆ. ಸಾವಿರ ಅಡಿಯ ಮೇಲೆ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದು ಅರಿಶಿಣ ಕುಂಕುಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಪ್ರತಾಪ್‌ ಅವರ ಈ ಸರ್ಪ್ರೈಸ್‌ಗೆ ಗಗನಾ ಅಕ್ಷರಶಃ ಫಿದಾ ಆಗಿದ್ದಾರೆ. ಈ ವಿಶೇಷ ಪ್ರೋಮೋವನ್ನು ಜೀ ಕನ್ನಡ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.

ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಶೋನಲ್ಲಿ ಈ ವಾರ ಸರ್ಪ್ರೈಸ್‌ ಸುತ್ತು ಶುರುವಾಗಿದೆ. ಅದರಲ್ಲಿ ಪ್ರತಿ ಬ್ಯಾಚುಲರ್ಸ್‌ ತಮ್ಮ ಪಾರ್ಟನರ್‌ಗೆ ಅಷ್ಟೇ ವಿಶೇಷವಾಗಿ ಸರ್ಪ್ರೈಸ್‌ ನೀಡಬೇಕು. ಆ ಸರ್ಪ್ರೈಸ್‌ಗೆ ಅವರು ಫಿದಾ ಆಗಬೇಕು. ಒಟ್ಟಾರೆ ತಮ್ಮ ಜತೆಗಿನ ಪಾರ್ಟನರ್‌ಗಳನ್ನು ಬ್ಯಾಚುಲರ್‌ಗಳು ಇಂಪ್ರೆಸ್‌ ಮಾಡಬೇಕು. ಅದರಂತೆ, ಇದೀಗ ಬಿಡುಗಡೆ ಆದ ಪ್...