Bengaluru, ಫೆಬ್ರವರಿ 14 -- ಟಾಲಿವುಡ್‌ ಮೆಗಾಸ್ಟಾರ್‌ ಚಿರಂಜೀವಿ ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದರು, ನಮಗೂ ಒಂದು ಗಂಡು ಬೇಕು ಎಂದು ಮನದಾಳ ಬಿಚ್ಚಿಟ್ಟಿದ್ದರು. ಹೀಗೆ ತಮ್ಮ ಅನಿಸಿಕೆ ಹೇಳಿಕೊಳ್ಳುತ್ತಿದ್ದಂತೆ, ಅವರ ವಿರುದ್ಧ ಕೆಲವರು ಟೀಕಾಸ್ತ್ರವನ್ನೇ ಆರಂಭಿಸಿದರು. ಹೆಣ್ಣು ಯಾವ ಕ್ಷೇತ್ರದಲ್ಲಿ ಕಡಿಮೆ ಇದ್ದಾಳೆ? ಹೆಣ್ಣೆಕೇ ಬೇಡ, ಗಂಡು- ಹೆಣ್ಣಿನ ನಡುವೆ ಈ ತಾರತಮ್ಯವೇಕೆ ಎಂದು ಚಿರಂಜೀವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಗಲೂ ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧ ಚರ್ಚಯೂ ನಡೆಯುತ್ತಿದೆ. ಇದೀಗ ಇದೇ ಹೇಳಿಕೆಗೆ ಡಾ. ವಿಷ್ಣುವರ್ಧನ್‌ ಅವರ ಅಭಿಮಾನಿ, ಪುಸ್ತಕ ಪ್ರೇಮಿ ವೀರಕಪುತ್ರ ಶ್ರೀನಿವಾಸ್‌ ಸುದೀರ್ಘ ಬರಹವೊಂದನ್ನು ಪೋಸ್ಟ್‌ ಮಾಡಿಕೊಂಡಿದ್ದಾರೆ.

ಸಂಬಂಧಿಕರು: ನಿಂಗೊಂದು ಗಂಡ್‌ ಆಗ್ಬೇಕಿತ್ತು ಸೀನಪ್ಪಾ!

ಸ್ನೇಹಿತರು: ಹೇ, ಒಂದು ಗಂಡ್‌ ಮಗು ಮಾಡ್ಕೋಂಡುಬಿಡು.

ಹಿತೈಷಿಗಳು: ಇಷ್ಟೆಲ್ಲಾ ಯಾರಿಗಾಗಿ? ಒಂದು ಮಾಡ್ಕೋ.

ಇಂತಹ ಚಿರಂಜೀವಿಗಳು ನಮ್ಮ ಸುತ್ತಮುತ್ತಲೇ ಇರುವಾಗ ನಾವು ನಟ ಚಿರಂಜೀವಿಯನ್ನೇ ಯ...