ಭಾರತ, ಮೇ 7 -- Ramya Krishnan: ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ ಹೀಗೆ ಸೌತ್‌ನ ನಾಲ್ಕೂ ಭಾಷೆಗಳಲ್ಲಿ ಮಿಂಚಿದ ಸ್ಟಾರ್‌ ನಟಿಯರ ಸಾಲಿನಲ್ಲಿ ರಮ್ಯಾ ಕೃಷ್ಣ ಸಹ ಟಾಪ್‌ ಸ್ಥಾನದಲ್ಲಿ ನಿಲ್ಲುತ್ತಾರೆ. ಸೌತ್‌ ಸ್ಟಾರ್‌ ಹೀರೋಗಳ ಜತೆಗೆ ನಟಿಸಿದ ಖ್ಯಾತಿ ಇವರದ್ದು. ಹೀಗೆ ಒಂದಾದ ಮೇಲೊಂದು ಮೆಟ್ಟಿಲು ಏರುತ್ತ, ಇಂದಿಗೂ ಸ್ಟಾರ್‌ ನಟಿಯಾಗಿ ಮಿಂಚುತ್ತ, ಇದೀಗ ಪೋಷಕ ನಟಿಯಾಗಿಯೂ ಮುಂಚೂಣಿಯಲ್ಲಿದ್ದಾರೆ ರಮ್ಯಾ ಕೃಷ್ಣನ್. ಹೀಗಿರುವಾಗ ಚಿತ್ರೋದ್ಯಮದಲ್ಲಿನ ಕಾಸ್ಟಿಂಗ್‌ ಕೌಚ್‌ ಬಗ್ಗೆಯೂ ನೀಡಿದ ಅವರ ಶಾಕಿಂಗ್‌ ಹೇಳಿಕೆ ವೈರಲ್‌ ಆಗಿದೆ.

ಪ್ರತಿಯೊಂದು ಉದ್ಯಮದಲ್ಲೂ ಮಹಿಳೆಯರು ಕಿರುಕುಳ ಅನುಭವಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳುವಂಥೆದ್ದೇನೂ ಇಲ್ಲ. ಈ ಹಿಂದೆಯೇ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಎಷ್ಟೋ ಮಂದಿ ಬಹಿರಂಗವಾಗಿಯೇ ಹೇಳಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಲೈಂಗಿಕ ಕಿರುಕುಳ ಅನುಭವ...