Koppal, ಮಾರ್ಚ್ 8 -- ಕೊಪ್ಪಳ: ಭಾರತದ ಪ್ರವಾಸಕ್ಕೆಂದು ಗುಂಪಿನೊಂದಿಗೆ ಬಂದಿದ್ದ ಇಸ್ರೇಲಿ ಪ್ರವಾಸಿಗ ಮಹಿಳೆ ಜತೆಗೆ ಹೋಂಸ್ಟೇ ಮಾಲೀಕರ ಮೇಲೂ ಅತ್ಯಾಚಾರವೆಸಗಿದ್ದೂ ಅಲ್ಲದೇ ಜತೆಗಿದ್ದ ಪ್ರವಾಸಿಗರ ಮೇಲೆ ದಾಳಿ ಮಾಡಲು ಮುಂದಾದಾಗ ಮೂವರೂ ನಾಲೆಗೆ ಹಾರಿದ್ದು, ಇಬ್ಬರು ಈಜಿ ದಡ ಸೇರಿದರೆ ಇನ್ನೊಬ್ಬಾತ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಾಣಾಪುರ ಎಂಬಲ್ಲಿ ನಡೆದಿದೆ. ಆರೋಪಿಗಳು ಪರಾರಿಯಾಗಿದ್ದು., ಅವರನ್ನು ಸೆರೆ ಹಿಡಿಯಲು ಕೊಪ್ಪಳ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ. ನಾಲೆಯಲ್ಲಿ ಮೃತಪಟ್ಟ ಯುವಕನನ್ನು ಒಡಿಶಾ ಮೂಲದ ಪ್ರವಾಸಿಗ ಎಂದು ಗುರುತಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ವಿದೇಶಿಗ ಪ್ರವಾಸಿಗ ಮಹಿಳೆ ಸೇರಿ ಇಬ್ಬರಿಗೆ ಕೊಪ್ಪಳದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕೊಪ್ಪಳ ಎಸ್ಪಿ ಡಾ.ರಾಮ ಅರಸಿದ್ದಿ ತಿಳಿಸಿದ್ದಾರೆ.

ಇಸ್ರೇಲ್‌ ಮಹಿಳೆಯೊಬ್ಬರು ಅಮೆರಿಕಾದ ಪ್ರವಾಸಿಗರ ಜತೆ ಸೇರಿ ಭಾರತಕ್ಕೆ ಬಂದಿದ್ದರು. ಅಲ್ಲಿಂದ ಒಡಿಶಾದ ಒಬ್ಬರು ಹಾಗೂ ಮಹಾರಾಷ್ಟ್ರದ ಮತ್ತೊಬ್ಬರು ಜತೆಗೂಡಿ ಹಂಪಿ...